ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಎಲ್ ಕೆ ಜಿ ತರಗತಿ ಪ್ರಾರಂಭಕ್ಕೆ ಉಚಿತ ದಾಖಲಾತಿ ಆಂದೋಲನ.
ನಾಯಕನಹಟ್ಟಿ ಪಟ್ಟಣದ
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ.
ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉಚಿತ ದಾಖಲಾತಿ ಪ್ರಾರಂಭಕ್ಕೆ ಜಾಥ ಮಾಡಲಾಯಿತು
ಇದೆ ವೇಳೆ ಶಿಕ್ಷಕ ಎಚ್ ಮಂಜುನಾಥ್ ಬದಲಾವಣೆಯ ಶಿಕ್ಷಣ ಭವಿಷ್ಯದ ಶೀರ್ಷಿಕೆ ಅಡಿಯಲ್ಲಿ ಕರ್ನಾಟಕ ಸರ್ಕಾರ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 2025 26 ನೇ ಸಾಲಿನ ಎಲ್‌ಕೆಜಿ ತರಗತಿ ಪ್ರಾರಂಭಿಸಲು ನಮ್ಮ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಂಕ 29.12.2025 ರಂದು ನೂತನವಾಗಿ ಎಲ್ ಕೆ ಜಿ ತರಗತಿ ಪ್ರಾರಂಭಿಸಿ ವಿಶೇಷವಾಗಿ ದಾಖಲಾತಿ ಆಂದೋಲನ ಆರಂಭಿಸಲಾಗಿದೆ ಎಲ್ ಕೆ ಜಿ ಉಚಿತ ಗುಣಮಟ್ಟದ ಶಿಕ್ಷಣ ಖಚಿತ ಸರ್ಕಾರಿ ಶಾಲೆಗಳಲ್ಲಿ ಫ್ರೀಯಾಗಿ ಯಾವುದೇ ಶುಲ್ಕವಿಲ್ಲದೆ ಒಬ್ಬ ತರಗತಿ ಶಿಕ್ಷಕಿಯನ್ನು ಮತ್ತು ಒಬ್ಬ ಹಾಯ ರವರನ್ನು ನೇಮಕ ಮಾಡಿಕೊಂಡು ಈ ವರ್ಷದಿಂದಲೇ ಎಲ್ ಕೆ ಜಿ ತರಗತಿಯಲ್ಲಿ ಪ್ರಾರಂಭ ಮಾಡಲಾಗುತ್ತದೆ ಪ್ರತಿಯೊಬ್ಬ ಮಕ್ಕಳು ಮೂರುವರೆ ವರ್ಷದಿಂದ 5:30 ವರ್ಷದ ಒಳಗಿನ ಮಕ್ಕಳು ದಾಖಲಾತಿ ಆಗುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಹಿರಿಯ ಮುಖ್ಯ ಶಿಕ್ಷಕಿ ಎನ್ ಇಂದಿರಮ್ಮ, ಶಿಕ್ಷಕ ಕೃಷ್ಣಾರೆಡ್ಡಿ, ಶಿಕ್ಷಕಿ ಚಂದನ, ಗಾಯತ್ರಿ ದೇವಿ, ಮಲ್ಲಿಕಾ ಭಾರಿ, ಸುಮಿತ್ರ ಮಂಜುಳಾ ಲಕ್ಷ್ಮಿ ಸೇರಿದಂತೆ ಶಾಲೆಯ ವಿದ್ಯಾರ್ಥಿನಿಯರು ಇದ್ದರು

