ಚಳ್ಳಕೆರೆ : •
ಪುಸ್ತಾವಿತ ವಿಕಸಿತ ಭಾರತ – ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB G RAM
6) 2025 ಮಸೂದೆಯನ್ನು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್)
ಖಂಡಿಸುತ್ತದೆ.
ಕಾರ್ಮಿಕರು ಮತ್ತು ಯಾವುದೆ ಕಾರ್ಮಿಕ ಗುಂಪುಗಳ ಜೊತೆ ಸಮಾಲೋಚನೆ
ನಡೆಸದೆ ಈ ಮಸೂದೆಯನ್ನು ರಚಿಸಿದೆ. ಈ ಮಸೂದೆ MGNREGA 2025 ಅನ್ನು ಪೂರ್ಣ
ಪ್ರಮಾಣದಲ್ಲಿ ಕಿತ್ತೊಗೆಯುವ ಹುನ್ನಾರವಾಗಿದೆ ಎಂದು
ಗ್ರಾಕೂಸ್ ತಾಲೂಕು ಕಾರ್ಯಕರ್ತ ಪರಮೇಶ್ ಬಿ, ಹೇಳಿದರು.
ಅವರು ನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು,
ಉದ್ಯೋಗ ಖಾತ್ರಿಯನ್ನು ಕೇಂದ್ರ
ಸರಕಾರದ ಬಿಗಿ ಮುಷ್ಟಿಯಿಂದ ಕೇಂದ್ರಿಕೃತ, ವಿವೇಚನಾಯುಕ್ತ, ಬಜೆಟ್ ನ್ನು ನಿಯಂತ್ರಿಸುವ
ಯೋಜನೆಯನ್ನಾಗಿ ಬದಲಾಯಿಸಲು ಹೊರಟಿದೆ. (ಬಡವರ ಉದ್ಯೋಗದ ಹಕ್ಕನ್ನು
ಕಸಿದುಕೊಳ್ಳುವ ಪ್ರಯತ್ನ ಇದಾಗಿದೆ)
ಪ್ರಸ್ತಾವಿತ ಮಸೂದೆಯ ಪ್ರಕಾರ ಪ್ರತಿ ವರ್ಷ ರಾಜ್ಯವಾರು “ಬಜೆಟ್ ಹಂಚಿಕೆ” ಯನ್ನು ಕೇಂದ್ರ
ಸರಕಾರ ನಿರ್ಧರಿಸುತ್ತದೆ ಹಾಗೂ ಯಾವುದೆ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರಕಾರಗಳೇ
ಭರಿಸಬೇಕು. ಪ್ರತಿ ರಾಜ್ಯದಲ್ಲಿ ಒದಗಿಸಲಾಗುವ ಮಾನವ ದಿನಗಳ ಸಂಖ್ಯೆಯ ಮೇಲೆ
ಮಿತಿಯನ್ನು ಹೇರುತ್ತದೆ. ಈಗಿರುವ ಬಜಟ್‌ನಲ್ಲಿ ಕೇಂದ್ರ ಸರಕಾರವು ಪ್ರತಿ ಕುಟುಂಬಕ್ಕೆ
ವರ್ಷಕ್ಕೆ 50 ದಿನಗಳ ಕೆಲಸವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಬಜೆಟ್‌ನ್ನು ಕೇಂದ್ರ
ಸರಕಾರವೆ ಮಿತಿಗೊಳಿ ತ್ತ ಹಣವನ್ನ ಸಂಗ್ರಹಿಸಲು ರಾಜ್ಯಗಳ ಮೇಲೆ ಇನಷ್ಟು ಹಣದ
ಹೊರೆ ಹಾಕುವ ಮೂಲಕ ಬಿಜೆಪಿ ಸರಕಾರ 125 ದಿನಗಳ ಉದ್ಯೋಗದ ಹುಸಿ ಭರವಸೆ
ನೀಡುತ್ತಿದೆ.
MGNREGA ರದ್ದುಗೊಳಿಸುವ ಮೂಲಕ ಬೇಡಿಕೆ ಆಧಾರಿತ ಹಕ್ಕಿನಿಂದ ಪುರೈಕೆ ಆಧಾರಿತ
ಯೋಜನೆಯನ್ನಾಗಿ ಬದಲಾಯಿಸಲಾಗಿದೆ. ಉದ್ಯೋಗ ಖಾತ್ರಿ ಇನ್ನು ಮುಂದೆ ಒಂದು
ಹಕ್ಕಲ್ಲ ಬದಲಾಗಿ ಯೊಜನೆ ಅನುಷ್ಠಾನದ ಮೇಲೆ ಕೇಂದ್ರ ಸರಕಾರದ ನಿಯಂತ್ರಣವನ್ನು
ಬಿಗಿಗೋಳಿಸಲಾಗಿದೆ.
ಕೇಂದ್ರ ಸರಕಾರ ಸೂಚಿಸಿದ ಆಯ್ದ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕೆಲಸ ಮಾಡುವ
ಹಕ್ಕು ಕಾರ್ಮಿಕರು ಪಡೆಯುತ್ತಾರೆ. ಕೇಂದ್ರ ಸರಕಾರ ಗುರುತಿಸದ ಪ್ರದೇಶದಲ್ಲಿ ಗ್ರಾಮೀಣ
ಕಾರ್ಮಿಕರಿಗೆ ಉದ್ಯೋಗದ ಖಾತರಿಯೇ ಇಲ್ಲವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ( ಗ್ರಾಕೂಸ್) ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ತಾಲೂಕು ಕಾರ್ಯಕರ್ತರು ಮಂಜಮ್ಮ ,
ಸಂಧ್ಯಾ , ಪರಮೇಶ್ ಬಿ ,
ತಿಪ್ಪೇಸ್ವಾಮಿ ಇತರರು ಇದ್ದರು.

