ಮೊಳಕಾಲ್ಕೂರು: ಪೊಲೀಸರ ಬಲೆಗೆ ಬಿದ್ದ ಖರ್ತನಾಕ್
ಖದೀಮ
ಮೊಳಕಾಲ್ಕೂರಿನಲ್ಲಿ ಬ್ಯಾಂಕುಗಳಿಂದ ಹಣ ಡ್ರಾ ಮಾಡಿಕೊಂಡು
ಬರುತ್ತಿದ್ದವರ ಗಮನ ಬೇರೆಡೆ ಸೆಳೆದು ಹಣ ದೋಚಿ
ಪರಾರಿಯಾಗುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು
ಬಂಧಿಸಿದ್ದಾರೆ. ಭದ್ರಾವತಿ ಮೂಲದ ಸೂರ್ಯ ಕರಿಯಲು ಬಂಧಿತ
ಆರೋಪಿ. ಬ್ಯಾಂಕ್ ನಿಂದ ಹಣ ಪಡೆದು ವಾಪಸ್ಸಾಗುತ್ತಿದ್ದ
ವ್ಯಕ್ತಿಗಳನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ. ಬಂಧಿತನಿಂದ 4 ಲಕ್ಷ
ರೂಪಾಯಿ ಹಣ ವಶಕ್ಕೆ ಪಡೆದಿದ್ದಾರೆ.

