ಹಿರಿಯೂರು: ಪತ್ರಬರಹಗಾರರ ಬೇಡಿಕೆಗಳ
ಈಡೇರಿಕೆಗಾಗಿ ಲೇಖನಿ ಸ್ಥಗಿತ ಧರಣಿ
ಹಿರಿಯೂರು ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘದ
ಅಧ್ಯಕ್ಷ ದೇವರಾಜು ಅವರು, ಹೊರ ರಾಜ್ಯಗಳಂತೆ ನಮ್ಮಲ್ಲೂ
ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು, ನೋಂದಣಿ
ಆಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ
ಬರಹಗಾರರ ಅಥವಾ ವಕೀಲರ ಬಿಲ್ ಕಡ್ಡಾಯಗೊಳಿಸಬೇಕು
ಮತ್ತು ಪತ್ರಬರಹಗಾರರಿಗೆ ಸರ್ಕಾರದ ಅಧಿಕೃತ ಗುರುತಿನ ಚೀಟಿ
ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಹಿರಿಯೂರು ತಾಲ್ಲೂಕು
ಕಚೇರಿ ಆವರಣದಲ್ಲಿ ಪತ್ರಬರಹಗಾರರ ಬೇಡಿಕೆಗಳ
ಈಡೇರಿಕೆಗೆ ಒತ್ತಾಯಿಸಿ, ಹಿರಿಯಉಪನೊಂದಣಾಧಿಕಾರಿಗಳಿಗೆ
ಮನವಿ ಸಲ್ಲಿಸಿ ಅವರು ಈ ಮಾತುಗಳನ್ನಾಡಿದರು.

About The Author

Namma Challakere Local News
error: Content is protected !!