ಹಿರಿಯೂರು: ಸಿಮೆಂಟ್ ಬ್ಲಾಕ್ ನ ಧೂಳಿನಿಂದ
ಹಾಳಾದ ತೋಟ ಕಂಗಾಲದ ರೈತ
ಹಿರಿಯೂರಿನ ಸೋಮೇರಹಳ್ಳಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ
ಜಯಣ್ಣ ಅವರಿಗೆ ಸೇರಿದ ಅಕ್ಸಸ್ ಸಿಮೆಂಟ್ ಬ್ಲಾಕ್ ತಯಾರಿಸುವ
ಘಟಕದ ಧೂಳಿನಿಂದ ಸುತ್ತಮುತ್ತಲಿನ ತೋಟಗಳ ಬೆಳೆಗಳಿಗೆ
ಹಾನಿಯಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು
ಎಂದು ದಲಿತ ಮುಖಂಡ ಶ್ರೀನಿವಾಸ್ ಒತ್ತಾಯಿಸಿದ್ದಾರೆ. ಅಡಿಕೆ
ತೋಟದ ಮಾಲೀಕ ಸೋಮಣ್ಣ ಅವರು ತಮ್ಮ ಗಿಡಗಳಿಗೆ
ತೊಂದರೆಯಾದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ
ನೀಡಿದ್ದರು, ಆದರೆ ಘಟಕದವರು ನಿರ್ಲಕ್ಷ್ಯ ತೋರಿದ್ದಾರೆ ಎಂದು
ಅವರು ಆರೋಪಿಸಿದ್ದಾರೆ.

