ಮತ್ಸಾಂಜನೇಯ ಜಾತ್ರೆ- ಉಟ್ಲು ಪರಿಷೆ.
ಪರಶುರಾಂಪುರ
ಸಮೀಪದ ಮತ್ಸಮುದ್ರ ಗ್ರಾಮದ ಮತ್ಸ್ಯಾಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆ ಪ್ರತಿ ವರ್ಷದಂತೆ ಭಾನುವಾರ ಸಂಜೆ ಉಟ್ಲು ಪರಿಷೆ ನಡೆಯಿತು.
ಉಟ್ಲ ಪರಿಷೆ : ಉಟ್ಲ ಪರಿಷೆ ಇಲ್ಲಿನ ವಿಶೇಷವಾಗಿದೆ. ಉದ್ದನೆಯ ಕಂಬಕ್ಕೆ ಜೇಡಿ ಮಣ್ಣನ್ನು ಕಂಬದ ಸುತ್ತ ಮೆತ್ತಿ, ಮೇಲಿನಿಂದ ಲೋಳೆರಸವನ್ನು ಒಬ್ಬರು ಸುರಿಯುತ್ತಿರುತ್ತಾರೆ. ಅತಿ ನುಣುಪಿನ ಜಾರುವ ಕಂಬವನ್ನು ಶ್ರದ್ಧಾ ಭಕ್ತಿಯಿಂದ ಮತ್ಸಾಂಜನೇಯ ಸ್ವಾಮಿಯನ್ನು ಪೂಜೆ ಸಲ್ಲಿಸಿದ.ಬಳಿಕ ಎಂಟೆತ್ತು ಜನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಕಂಬವನ್ನ ಹತ್ತಲು ಮೂರುನಾಲ್ಕು ಬಾರಿ ಅಧ೯ಕ್ಕೆ ಹತ್ತಿ ವಿಫಲವಾದ ಬಳಿಕ,ಜನರು ಕೇಕೆ ಚಪ್ಪಾಳೆ ದೇವರ ನಾಮ ಜೋರಾಗಿತ್ತು.ಬಳಿಕ ಎಲ್ಲರ ಒಮ್ಮಸಿನಿಂದ ನೆನೆದು ಶಿವಕುಮಾರ್ ಎನ್ನುವರು ಕಂಬದ ಮೇಲಿದ್ದ ನಾಲ್ಕು ತೆಂಗಿನ ಕಾಯಿ ಮುಟ್ಟಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದೇವರ ಪ್ರಸಾದ ನೀಡಿ ಗೌರವಿಸಿದರು. ಈ ಆಟ ನೋಡಲು ನೆರೆ ಆಂಧ್ರ ಹಾಗೂ ರಾಜ್ಯದ ನಾನಾ ಭಾಗ ಮತ್ತು ಸುತ್ತಮತ್ತಲ ಹಳ್ಳಿಗಳಿಂದ ಜನರು ಸೇರಿದ್ದರು.
ಜಾತ್ರಾ ಮಹೋತ್ಸವದಲ್ಲಿ ಅಂಗವಾಗಿ ಶನಿವಾರ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಶಾಸಕ ಟಿ.ರಘುಮಾತಿ೯ ಸೇರಿದಂತೆ ಇನ್ನಿತರರು ಭಾಗವಹಿಸಿ, ,ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಸಮರ್ಥರಾಯ, ಅನಿಲ್, ಆಂಜನೇಯ, ಮೂಡ್ಲಪ್ಪ, ತಿಪ್ಪೇಸ್ವಾಮಿ, ಹಾಲೇಶ್, ಜಯಣ್ಣ, ರುದ್ರಪ್ಪ ಸೇರಿದಂತೆ ದೇವಸ್ಥಾನ ಕಮಿಟಿ ಸದಸ್ಯರು ಹಾಗೂ ಗ್ರಾಪಂ ಸದಸ್ಯರು ,ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

