“ಭಾರತದ ಬೆನ್ನೆಲುಬು ಧರ್ಮ ಮತ್ತು ಆಧ್ಯಾತ್ಮ”:-ಅಭಿಷೇಕ್ ಚಕ್ರವರ್ತಿ ಅಭಿಮತ. ಚಳ್ಳಕೆರೆ:-ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಭಾರತದ ಬೆನ್ನೆಲುಬು ಧರ್ಮ ಮತ್ತು ಆಧ್ಯಾತ್ಮ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಅಭಿಷೇಕ್ ಚಕ್ರವರ್ತಿ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಕೊಲಂಬೊ ಇಂದ ಆಲ್ಮೋರಾ” ಪುಸ್ತಕದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ಅವರಿಂದ ಪ್ರಾರ್ಥನೆ,ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ, ಸಂನ್ಯಾಸಿ ಗೀತೆಯ ಗಾಯನ ನಡೆಯಿತು. ತರಗತಿಯಲ್ಲಿ ವೆಂಕಟಲಕ್ಷ್ಮೀ, ಲೋಹಿತ್,
ಚಾರ್ಮಿಶ್ರೀ, ದಾನೇಶ್ವರಿ, ಪುಷ್ಪಲತಾ, ಸೃಷ್ಟಿ ಸೇರಿದಂತೆ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

