ಹಿಂದೂ ಧರ್ಮವು ಶ್ರೀ ಕೃಷ್ಣ ರಥವಾದರೆ ಭಕ್ತಿ ಮತ್ತು ನಂಬಿಕೆಗಳೆರಡು ಕೂಡ ಈ ರಥದ ಗಾಲಿಗಳಿದ್ದಂತೆ ಎಂದು ನಿವೃತ್ತ ಕೆಎಸ್ ಅಧಿಕಾರಿ ಎನ್ ರಘು ಮೂರ್ತಿ ಹೇಳಿದರು

ಅವರು ಮೊಳಕಾಲ್ಮೂರು ಕ್ಷೇತ್ರದ ತಳುಕು ಬಳಿಯ ಓಬಣ್ಣನಹಳ್ಳಿ ಗ್ರಾಮದಲ್ಲಿ ಚನ್ನಬಸವೇಶ್ವರ ದೇವರು ಕಾರ್ತಿಕೋತ್ಸವದ ಸಂಬಂಧ ಹೊಸ ರಥದ ಪ್ರಾರಂಭೋತ್ಸವ ಸಂದರ್ಭದಲ್ಲಿ ಮಾತನಾಡಿ ಇವತ್ತು ಭಾರತದ ಹಿಂದೂ ಧರ್ಮದ ಬೆಳಕು ಜಗತ್ತಿನಲ್ಲಿಲ್ಲಡೆ ಗೋಚರಿಸುತ್ತಿದೆ ಇದಕ್ಕೆ ಮೂಲ ಕಾರಣ ಶ್ರೀ ರಾಮಾಯಣ ಮಹಾ ಕಾವ್ಯ ಮತ್ತು ಭಗವದ್ಗೀತೆ ಈ ಎರಡು ಗ್ರಂಥಗಳು ಧರ್ಮದ ದೀವಟಿಗೆ ಒತ್ತಿಸಿದವು ತರುವಾಯದಲ್ಲಿ ವಚನಕಾರರು ಮತ್ತು ಕೀರ್ತನೆಕಾರರು ಅವರ ಕೀರ್ತನೆ ಮತ್ತು ವಚನಗಳಿಂದ ಈ ಧರ್ಮದ ದೇವತೆಗೆ ಎಣ್ಣೆಯನ್ನು ಅರ್ಪಿಸಿದರು ಸ್ವಾಮಿ ವಿವೇಕಾನಂದರು ಈ ದಿವಟಿಗೆ ಬೆಳಕನ್ನು ಜಗತ್ತಿನಲ್ಲೆಡೆ ಪಸರಿಸಿದರು

ದಕ್ಷಿಣ ಭಾರತದ ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಣಕಾಲಮರು ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಈ ಧರ್ಮದ ದೀಪದ ಮುಖಾಂತರ ಧಾರ್ಮಿಕ ಪರಂಪರೆಗಳು ವಿಶಿಷ್ಟವಾದ ಹಬ್ಬ ಹರಿದಿನಗಳು ಜಾತ್ರೆ ತೇರುಗಳು ದಿನಂ ಪ್ರತಿ ರಾರಾಜಿಸುತ್ತವೆ ಇದರಿಂದ ಸಮಾಜದಲ್ಲಿ ಪ್ರತಿ ಮನೆಗಳಲ್ಲಿ ಚೈತನ್ಯದ ಬಾಗಿಲು ತೆರೆದಿದೆ ಶಾಂತಿ ನೆಮ್ಮದಿ ಬಾತೃತ್ವ ಎಲ್ಲ ಕೋಮುಗಳಲ್ಲಿ ಮನೆ ಮಾಡಿದೆ ವರ್ಷಪೂರ್ತಿ ಪ್ರತಿ ಗ್ರಾಮಗಳಲ್ಲಿ ಉತ್ತಮ ಮಳೆ ಬೆಳೆ ಆರೋಗ್ಯ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ನೀಡಲಿ ಎಂದು ಭಗವಂತನಲ್ಲಿ ಸಂಕಲ್ಪ ಮಾಡುವ ಕಾರ್ಯವಾಗಿದೆ ನಿರಂತರವಾಗಿ ಇಂತಹ ಭಕ್ತಿಯ ಪ್ರತೀಕಗಳು ಮುಂದುವರಿಯಬೇಕು ಈ ನಮ್ಮ ದೇಶದ ಹಿಂದೂ ಧಾರ್ಮಿಕ ಪರಂಪರೆಗೆ ನಾವುಗಳೆಲ್ಲರೂ ಸೇರಿ ಅಳಿಲು ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು

ಸಮಾರಂಭದಲ್ಲಿ ಪಟೇಲ್ ಜಿ ತಿಪ್ಪೇಸ್ವಾಮಿ ಯತ್ನಟ್ಟಿ ಗೌಡ್ರು ಮಾತನಾಡಿ ಓಬಣನಹಳ್ಳಿ ಗ್ರಾಮ ವಿಶಿಷ್ಟವಾದ ಗ್ರಾಮ ಭಕ್ತಿ ಮತ್ತು ನಂಬಿಕೆಗೆ ಈ ಗ್ರಾಮ ಹೆಸರುವಾಸಿ ಈ ಗ್ರಾಮದಲ್ಲಿ ಇರುವವರೆಲ್ಲರೂ ಕೂಡ ಸುಸಂಸ್ಕೃತ ವ್ಯಕ್ತಿಗಳು ಗ್ರಾಮಸ್ಥರೇ ಸೇರಿ ಯಾವುದೇ ಸರಕಾರದ ಹಣವಿಲ್ಲದೆ ಈ ಒಂದು ದೊಡ್ಡ ಮತದ ರಥವನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿರುವುದು ತುಂಬಾ ಸಂತೋಷದ ವಿಚಾರವೆಂದು ಇದಕ್ಕೆ ಸಹಕರಿಸಿದ ಎಲ್ಲ ಭಕ್ತರಿಗೂ ಕೂಡ ಅಭಿನಂದನೆಯನ್ನು ಸಲ್ಲಿಸಿದರು

ಇದೇ ಸಂದರ್ಭದಲ್ಲಿ ಗೌರಸಮುದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ ಗ್ರಾಮ ಪಂಚಾಯತಿ ಸದಸ್ಯ ಗೋಪಾಲಪ್ಪ ಬಂಡೆ ತಿಮ್ಮಲಾಪುರ ಶ್ರೀಧರ ಅಜಯ್ ಕುಮಾರ್ ಎಲ್ಐಸಿ ಓಬಣ್ಣ ನಾಯಕನಹಟ್ಟಿ ರುದ್ರಪ್ಪ ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!