ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವೇ ನಮಗೆ ಶ್ರೀರಕ್ಷೆ: ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಸಲಹೆ.
ಚಳ್ಳಕೆರೆ-: ಅಂಬೇಡ್ಕರ್ ಎಂದರೆ ಒಬ್ಬ ವ್ಯಕ್ತಿ ಅಲ್ಲ ಅವರು ಮಹಾನ್ ಶಕ್ತಿ ಧ್ಯೇಯ ತತ್ವ ಆದರ್ಶಗಳ ಪ್ರತಿರೂಪವೇ ಅಂಬೇಡ್ಕರ್ ಎಂದು ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಹೇಳಿದರು.
ಸಮೀಪದ ಬೋರಪ್ಪನಹಟ್ಟಿ ಎ.ಕೆ. ಕಾಲೋನಿಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಪುಷ್ಪಾರ್ಚನೆ ಹಾಗೂ ಮೇಣದಬತ್ತಿ ಹಚ್ಚಿ ನಮನ ಸಲ್ಲಿಸಿ ಮಾತನಾಡಿದ ಅವರು. ಡಾ. ಬಿ.ಆರ್. ಅಂಬೇಡ್ಕರ್ ರವರು ಕಾಣಬೇಕಾದರೆ ಪುಸ್ತಕದಲ್ಲಿ ನಾವು ಅವರನ್ನು ಕಾಣಬೇಕಾಗುತ್ತದೆ ಆದರಿಂದ ಗ್ರಾಮದ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಿ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಶಿವಕುಮಾರ್, ಊರಿನ ಮುಖಂಡರಾದ ಆನಂದಪ್ಪ, ಎನ್ ಚೌಡಪ್ಪ, ವಸಂತಪ್ಪ , ಚೌಡಪ್ಪ, ರವಿಣ್ಣ,
ಜಗಣ್ಣ, ಜಗಳೂರಪ್ಪ,
ಪ್ರತಾಪ ,ಪರಮೇಶ್, ಕೊಟ್ರೇಶ್, ನಿಂಗರಾಜ್, ಮಂಜು, ಸತೀಶ್ ಕುಮಾರ್, ವೆಂಕಟೇಶ್ ಮಧು ಉಲ್ಲಾಸ ನಾಗರಾಜ್, ಸಿದ್ದೇಶ್, ಶಿವಲಿಂಗ ,ಮಾರಣ್ಣ, ಓಬಳೇಶ್ ,ಗಿರೀಶ್, ಗುರುಸ್ವಾಮಿ, ಅಶೋಕ, ರಾಜ್,
ಆದರ್ಶ ,ಮಗಧೀರ, ಸೇರಿದಂತೆ ಸಮಸ್ತ ಬೋರಪ್ಪನಹಟ್ಟಿ ಗ್ರಾಮಸ್ಥರು ಇನ್ನೂ ಊರಿನ ಎಲ್ಲಾ ಮಹಿಳೆಯರು ಇದ್ದರು

