ಬುಡಕಟ್ಟು ಜನರ ಆರಾಧ್ಯ ದೈವ ಶ್ರೀ ಬೋಸೆರಂಗಸ್ವಾಮಿ ಜಾತ್ರೋತ್ಸವ ಸಂಭ್ರಮ.

ನಾಯಕನಹಟ್ಟಿ:-
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೋಸೇದೇವರಹಟ್ಟಿ ಗ್ರಾಮದ ಬೋಸೇರಂಗಸ್ವಾಮಿ ಶನಿವಾರ ದಾಸೋಹ ಮತ್ತು ದೇವರ ಎತ್ತು ಓಡಿಸುವುದು ಅದ್ದೂರಿಯಾಗಿ ನಡೆಯಿತು

ಬುಡಕಟ್ಟು ಸಂಸ್ಕೃತಿ ಸಂಪ್ರದಾಯದಂತೆ ಗ್ರಾಮದಲ್ಲಿ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ಈ ಜಾತ್ರೆಯನ್ನು ಆಚರಣೆ ಮಾಡಲಾಗುತ್ತದೆ.

ಗುರುವಾರ ಮದ್ಯಾಹ್ನ 3-00 ಗಂಟೆಗೆ ಶ್ರೀ ಸ್ವಾಮಿಯು ದೇವರ ಎತ್ತುಗಳೊಂದಿಗೆ ಹಾಗೂ ಸಕಲ ಬಿರುದಾವಳಿಗಳೊಂದಿಗೆ ಹಿರೇಕೆರೆ ಕಾವಲಿನ ಮೂಲ ಜಾತ್ರಾ ಸ್ಥಾನಕ್ಕೆ ಆಗಮಿಸಲಾಯಿತು.ದೇವರ ಎತ್ತುಗಳೊಂದಿಗೆ ಮೆರವಣಿಗೆ ಸಾಗಿತು, ಪಲ್ಲಕ್ಕಿಯಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಛತ್ರಿ ಚಾಮರ ಡೊಳ್ಳು ವಾದ್ಯಗಳೊಂದಿಗೆ ಬುಡಕಟ್ಟು ಸಂಪ್ರದಾಯದಂತೆ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು,ನಂತರ ಪೂಜೆ, ಮಂಗಳಾರತಿ ನಡೆಸಲಾಯಿತು.

ಶುಕ್ರವಾರ ಬೆಳಗಿನ ಜಾವ 4-00 ಗಂಟೆಗೆ ಶ್ರೀ ಸ್ವಾಮಿಗೆ ಮಹಾಪೂಜೆ ಮತ್ತು ದಾಸರಿಂದ ಪಂಜಿನ ಸೇವೆ, ಹುರುಳು ಸೇವೆ ನಡೆಯಿತು.

ಪ್ರತಿವರ್ಷದಂತೆ ಈ ಜಾತ್ರೆಯು ನಾಲ್ಕು ದಿನಗಳ ಕಾಲ ನಡೆಯಲಿದ್ದು ಭಾನುವಾರದಂದು ಶ್ರೀ ಬೋಸೆರಂಗ ಸ್ವಾಮಿ ದೇವರನ್ನು ಗ್ರಾಮಸ್ಥರು ಗ್ರಾಮಕ್ಕೆ ಅದ್ದೂರಿಯಾಗಿ ಸಕಲ ಬಿರುದಾವಳಿಗಳೊಂದಿಗೆ ಗ್ರಾಮಕ್ಕೆ ಕರೆತಂದು ಸಕಲ ಪೂಜಾ ವಿಧಿ ವಿಧಾನಗಳ ಮೂಲಕ ಗುಡಿದುಂಬಿಸಲಾಗುತ್ತದೆ ನಂತರ ಜಾತ್ರೆಗೆ ತೆರೆ ಬೀಳಲಿದೆ.

ಇದೆ ವೇಳೆ ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ ಮಾತನಾಡಿದರು ಪ್ರತಿ ವರ್ಷ ಸಂಪ್ರದಾಯದಂತೆ ಶ್ರೀ ಬೋಸೆರಂಗಸ್ವಾಮಿ ಜಾತ್ರಾ ಮಹೋತ್ಸವ ಜರುಗುತ್ತದೆ ಬುಡಕಟ್ಟು ಜನರ ಆರಾಧ್ಯ ದೈವ ಶ್ರೀ ಬೋಸೆರಂಗ ಸ್ವಾಮಿ ಜಾತ್ರೆಯು ಭಾರತೀಯ ಸನಾತನ ಸಂಸ್ಕೃತಿ ನಮ್ಮ ಧರ್ಮದ ಪ್ರತೀಕ ಈ ಆರಾಧನೆ ಪೂಜೆಗಳು ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಜನರು ವಾಸಿಸುವ ಸುಮಾರು 35 ಹಳ್ಳಿ ಹಾಗೂ ಬೋಸೆದೇವರಹಟ್ಟಿ ಗ್ರಾಮ ಸೇರಿದಂತೆ ಮ್ಯಾಸ ನಾಯಕರ ಆರಾಧ್ಯ ದೈವ ಬೋಸೆರಂಗಸ್ವಾಮಿ ಭಾಗದಲ್ಲಿ ಉತ್ತಮ ಮಳೆ ಬೆಳೆ ಜನರಿಗೆ ಉತ್ತಮ ಆರೋಗ್ಯ ನೀಡಲಿ ಎಂದರು.

ಬೋಸೆರಂಗ ಸ್ವಾಮಿ ದೇವರ ಗುಡಿಕಟ್ಟಿನ ಯಜಮಾನರಾದ ಪೂಜಾರಿ ಮಲ್ಲಿಕಾರ್ಜುನ್, ಯಜಮಾನ ಬೊರಯ್ಯ, ಪೂಜಾರಿ ಮುದಿಯಪ್ಪ, ಎತ್ತಿನ ಬೋಸಯ್ಯ, ಕುರಿ ಕಿಲಾರಿ ಬೋರಯ್ಯ, ಮುಂಡಲಾರ್ ಬೊಮ್ಮನ ಬೋಸಯ್ಯ, ಸಕ್ರಿ ದಾಸಯ್ಯ,ಹಾಗೂ
ನಾಯಕನಹಟ್ಟಿ ಪಟ್ಟಣದ ಎಂವೈಟಿ ಸ್ವಾಮಿ, ಪಿ.ಶಿವಣ್ಣ, ಚನ್ನಗಾನಹಳ್ಳಿ ಮಲ್ಲೇಶ್, ಗುಂತಕೋಲ್ಮನಹಳ್ಳಿ ಸಿದ್ದಲಿಂಗಪ್ಪ, ಜೆಸಿಬಿ ತಿಪ್ಪೇಸ್ವಾಮಿ, ಬಿ. ಶಂಕರ್ ಸ್ವಾಮಿ, ಕೆ.ಟಿ. ಮಂಜಣ್ಣ,
ಸೇರಿದಂತೆ ಬೋಸೆ ರಂಗಸ್ವಾಮಿ ದೇವರ ಗುಡಿಕಟ್ಟಿನ ಅಣ್ಣ-ತಮ್ಮಂದಿರು ಭಕ್ತಾದಿಗಳು ಸಮಸ್ತ ಊರಿನ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!