ನಾಯಕನಹಟ್ಟಿ-: ಡಾ. ಬಿ.ಆರ್ .ಅಂಬೇಡ್ಕರ್ ಕಲಿಯುಗದ ದೇವರು ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶನಿವಾರ ನಾಯಕನಹಟ್ಟಿ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ಸಂಸ್ಥೆ ಶಾಲಾ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರು ಕಲಿಯುಗದ ದೇವರು ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಸಮ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡಿದ ಇಡೀ ವಿಶ್ವವೇ ಮೆಚ್ಚುವಂತ ಮಹಾ ಸಂವಿಧಾನವನ್ನ ರಚನೆ ಮಾಡಿ ನಮ್ಮೆಲ್ಲರಿಗೂ ಸ್ವತಂತ್ರವಾಗಿ ಬದುಕಲು ಹಕ್ಕನ್ನು ನೀಡಿದ್ದಾರೆ ಅಂತ ಪುಣ್ಯಾತ್ಮರನ್ನು ಪ್ರತಿಯೊಬ್ಬರು ಗೌರವಿಸುವ ಮತ್ತು ಸ್ಮರಿಸುವ ಕೆಲಸವಾಗಬೇಕು ವಿದ್ಯಾರ್ಥಿಗಳು ಡಾ.ಬಿ. ಆರ್. ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ವಿದ್ಯಾರ್ಥಿಗಳು ಉತ್ತಮವಾಗಿ ಶಿಕ್ಷಣವನ್ನು ಪಡೆದು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ, ಪಿ.ಶಿವಣ್ಣ, ಪ್ರಾಂಶುಪಾಲರಾದ ಶ್ರೀನಿವಾಸ್, ಬಿ ಆರ್ ರಮೇಶ್, ದಲಿತ ಮುಖಂಡರಾದ ಚನ್ನಗಾನಹಳ್ಳಿ ಮಲ್ಲೇಶ್, ಮರಿಪಾಲಯ್ಯ, ಶಿವದತ್ತ, ಜಾಗನೂರಹಟ್ಟಿ ನಾಗರಾಜ್, ಗುಂತಕೋಲ್ಮನಹಳ್ಳಿ ಸಿದ್ದಲಿಂಗಪ್ಪ, ಬಿ.ಶಂಕರ್ ಸ್ವಾಮಿ, ತಾರಕೇಶ್, ಗಜ್ಜುಗಾನಹಳ್ಳಿ ಜಿ.ಬಿ. ತಿಪ್ಪೇಸ್ವಾಮಿ, ಗೌಡಗೆರೆ ರಾಜು, ಸೇರಿದಂತೆ ಶಾಲೆಯ ಶಿಕ್ಷಕ- ಶಿಕ್ಷಕಿಯರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.

About The Author

Namma Challakere Local News
error: Content is protected !!