ಚಿತ್ರದುರ್ಗ: ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ಕಾಂಗ್ರೆಸ್
ನಾಯಕರು
ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರು ಚಿತ್ರದುರ್ಗದಲ್ಲಿ
ಸೋಮವಾರ ಸುದ್ದಿಗೋಷ್ಠಿ ನಡೆಸಿ, ರಾಜ್ಯದ ಕಾಂಗ್ರೆಸ್ ಸರ್ಕಾರವು
ರೈತರು, ಕಾರ್ಮಿಕರು ಮತ್ತು ಬಡವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ
ಎಂದು ಆರೋಪಿಸಿದರು. ಎಲ್ಲರೂ ಅಧಿಕಾರ ಹಿಡಿಯುವ ಬಗ್ಗೆಯೇ
ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಹಾಗೂ
ಸಚಿವರು ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಮತ್ತು ತಮಗೆ ಮತ
ನೀಡಿದ ಮತದಾರರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು
ಹೇಳಿದರು.

