“ಬಾಲಸಹಜ ವ್ಯಕ್ತಿತ್ವ ಶ್ರೀರಾಮಕೃಷ್ಣರದ್ದು”:- ವೆಂಕಟಲಕ್ಷ್ಮೀ ಅಭಿಪ್ರಾಯ. ಚಳ್ಳಕೆರೆ:- ಶ್ರೀರಾಮಕೃಷ್ಣರದ್ದು ಬಾಲಸಹಜ ವ್ಯಕ್ತಿತ್ವ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀವೆಂಕಟಲಕ್ಷ್ಮೀ ಅವರು ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-2″ರ ಗ್ರಂಥ ಪಾರಾಯಣ ಮಾಡುತ್ತ “ದಕ್ಷಿಣೇಶ್ವರಕ್ಕೆ ವಿದಾಯ” ಎಂಬ ಅಧ್ಯಾಯವನ್ನು ವಾಚಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿಯನ್ನು ಕುಮಾರಿ ಪುಷ್ಪಲತಾ ಅವರು ನಡೆಸಿಕೊಟ್ಟರು. ಸತ್ಸಂಗ ಕಾರ್ಯಕ್ರಮದಲ್ಲಿ ಪಿ.ಎಸ್.ಮಾಣಿಕ್ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ, ಚೇತನ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!