ಗ್ರಾಮಪಂಚಾಯಿತಿ ಸದಸ್ಯರು ವೈಯುಕ್ತಿಕ ದ್ವೇಷವನ್ನು ಮರೆತು ಗ್ರಾಮಗಳ ಅಧಿವೃದ್ಧಿ ಹಾಗೂ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡುವಂತೆ ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ತಾಲೂಕಿನ ಸಾಣೀಕೆರೆ ಗ್ರಾಮದಲ್ಲಿ ವರ್ಗ 1 ಹಾಗೂ15 ನೇ ಹಣಕಾಸು ಯೋಜನೆಯಡಿ ಸುಮಾರು60 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಗ್ರಾಮಪಂಚಾಯಿತಿ ಕಚೇರಿ ಕಟ್ಟಡ .50 ವಿಕಲಚೇತನರಿಗೆ ಹೊಲಿಗೆ ಯಂತ್ರ ಹಾಗೂ ಗ್ರಂಥಾಲಯಲಯ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಉದ್ಘಾಟನೆಯವರೆಗೆ ಕಾಯದ ಸಾರ್ವಜನಿಕ ಸೇವೆಗೆ ಬಳಕೆ ಮಾಡಿಕೊಳ್ಳುವಂತೆ ವೈದ್ಯಾಧಿಕಾರಿಗೆ ಸೂಚನೆ ನೀಡಿದರು.
ತಾಲೂಕಿನ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನ ಸೋಲರ್ ಕಂಪನಿಗಳಿಂದ ತೆರಿಗೆ ವಸೂಲಿ ಹಾಗೂ ಸಿ ಎಸ್ ಆರ್ ನಿಧಿಯೋಜನೆಯಡಿಯಲ್ಲಿ ಶಾಲಾ ಕಟ್ಟಡಗಳು ಗ್ರಾಮಗಳ ಅಭಿವೃದ್ಧಿ ಮಾಡದ ಸೋಲಾರ್ ಕಂಪನಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಕಾಶ್ ಪ್ಲಾಂಜ ಸೇರಿದಂತೆ .ಯಾವುದೇ ಕಂಪನಿಗಳು ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡ ಬೇಕು .
ಗ್ರಾಮಪಂಚಾಯಿತಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಅಲೆದಾಡಿಸದೆ ಕೆಲಸ ಮಾಡಿಕೊಡಬೇಕು ಕಟ್ಟಕಡೆ ವ್ಯಕ್ತಿಗಳನ್ನು ಗುರುತಿಸಿ ಅರ್ಹರ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳನ್ನು ನೀಡ ಬೇಕು ಎಂದು ತಿಳಿಸಿದರು.
ಗ್ಯಾರೆಂಟಿ ಸಮಿತಿ ಅಧ್ಯಕ್ಷ. ಗದ್ದಿಗೆ ತಿಪ್ಪೇಸ್ವಾಮಿ.ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ.ತಾಪಂ ಇಒ ಶಶಿಧರ್ .ಪಿಡಿಒ ದೇವರಾಜ್ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಗ್ರಾಪಂ ಅಧ್ಯಕ್ಷ ನಾಗರಾಜ್.ಉಪಾಧ್ಯಕ್ಷೆ ಶಶಿಕಲಾ. ಗ್ರಾಪಂ ಸದಸ್ಯರು ತಹಶೀಲ್ದಾರ್ ರೇಹಾನ್ ಪಾಷ. ನಿರ್ಮಿತಿ ಕೇಂದ್ರ ಜೆಇ ಸಿದ್ದೇಶ್. ಪ್ರಕಾಶ್ ಐರನ್ ಪ್ಲಾಂಜ ಕಾರ್ಖಾನೆ ಅಧಿಕಾರಿಗಳು ಗ್ರಾಮಸ್ಥರು ಇತರರಿದ್ದರು.

