ಮೊಳಕಾಲ್ಕೂರು: ರಂಗಯ್ಯನ ದುರ್ಗ ಜಲಾಶಯಕ್ಕಿಲ್ಲ
ಬಾಗೀನ ಭಾಗ್ಯ
ಬರಪೀಡಿತ ಮೊಳಕಾಲೂರು ತಾಲೂಕಿನ ಏಕೈಕ ಜಲಮೂಲ
ರಂಗಯ್ಯನದುರ್ಗ ಜಲಾಶಯವು ಅರ್ಧ ಟಿಎಂಸಿ ಸಾಮರ್ಥ್ಯ
ಹೊಂದಿದ್ದು, ಉತ್ತಮ ಮಳೆಯಿಂದಾಗಿ ಇದೀಗ ತುಂಬಿ ಹರಿದಿದೆ.
ಹೆಚ್ಚಿನ ನೀರನ್ನು ಹೊರಬಿಡಲಾಗಿದೆ.
ಆದರೂ, ಈ ಜಲಾಶಯಕ್ಕೆ
ಬಾಗೀನ ಅರ್ಪಿಸುವ ಭಾಗ್ಯ ರೈತರಿಗೆ ದೊರೆತಿಲ್ಲ ಎಂದು ಅವರು
ಬೇಸರ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ
ಉಸ್ತುವಾರಿ ಸಚಿವರು ತುಂಬಿ ಹರಿದ ಜಲಾಶಯಕ್ಕೆ ಬಾಗೀನ
ಅರ್ಪಿಸದೆ ನಿರ್ಲಕ್ಷ ವಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

