.

ಚಿತ್ರದುರ್ಗದಲ್ಲಿ ಆಟೋ ಚಾಲಕರಿಗೆ
ಪೋಲೀಸ್ ಕಿರಿಕಿರಿ ಉಂಟುಮಾಡುತ್ತಿದ್ದಾರೆ, ಇನ್ನೂ ಸುಖಾ ಸುಮ್ಮನೆ ರಸ್ತೆಯಲ್ಲಿ ಥಳಿಸುತ್ತಾರೆ ಎಂದು ಆರೋಪಿಸಿ,
ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ
ಆಟೋ ಚಾಲಕ ತಿಪ್ಪೇಸ್ವಾಮಿ ಹಾಗೂ ಕುಟುಂಬಕ್ಕೆ ಪರಿಹಾರ
ನೀಡಬೇಕೆಂದು ಆಗ್ರಹಿಸಿ, ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ
ಸಾವಿರಾರು ಆಟೋ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ
ನಡೆಸಿದರು.

ಈ ವೇಳೆ ಬಸ್ ಗಳನ್ನು ತಡೆಯಲಾಗಿದ್ದು, ಸುಮಾರು
ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಮಾಡಲಾಗಿತ್ತು.
ಇದರಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಇನ್ನೂ ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಆಟೋ ಚಾಲಕನ ಘಟನೆಗೆ ಸ್ಪಷ್ಟನೆ
ನೀಡಿದ ಎಸ್ಪಿ
ಚಿತ್ರದುರ್ಗದಲ್ಲಿ, ಒನ್ ವೇ ನಲ್ಲಿ ಬಂದ ಆಟೋ ಚಾಲಕ
ತಿಪ್ಪೇಸ್ವಾಮಿ ಅವರನ್ನು ತಡೆದು ಪ್ರಶ್ನಿಸಿದಾಗ, ಆತ ಸರಿಯಾಗಿ
ಮಾತನಾಡಲಿಲ್ಲ. ಕುಡಿದಿರಬಹುದೆಂದು ಶಂಕಿಸಿ, ಎಎಸ್‌ಐ
ಕರೆಸಿ ಟೆಸ್ಟ ಮಾಡಿಸಲು ಹೋದಾಗ ಆತ ಸ್ಪಂದಿಸದೆ ಮಾತಿನ
ಚಕಮಕಿ ನಡೆಸಿದನು ಎಂದು ಚಿತ್ರದುರ್ಗ ಎಸ್ಪಿ ರಂಜಿತ್
ಕುಮಾರ್ ಸ್ಪಷ್ಟಪಡಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ
ಅವರು, ಆಟೋ ಚಾಲಕ ಸ್ವಲ್ಪ ಹೊತ್ತಿನಲ್ಲಿ ಬಂದು ಪೆಟ್ರೋಲ್
ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು
ಎಂದು ತಿಳಿಸಿದರು…

About The Author

Namma Challakere Local News
error: Content is protected !!