ಎನ್. ಮಹದೇವಪುರ ಗ್ರಾ.ಪಂ.ಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ಹಾಗೂ ಗ್ರಾಮಸ್ಥರಿಗೆ ಸಲಹೆ.

ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಬಡ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ವಿವಿಧ ಯೋಜನೆಯನ್ನು ಜಾರಿಗೆ ತಂದಿದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳುವಂತೆ ಕಿವಿಮಾತ ಹೇಳಿದರು.

ಶುಕ್ರವಾರ ಸಮೀಪದ ಎನ್. ಮಹದೇವಪುರ ಗ್ರಾಮ ಪಂಚಾಯತಿಯ ಆವರಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು 2025 26 ನೇ ಸಾಲಿನ ರಾಜ್ಯ ಹಣಕಾಸು ಆಯೋಗ ಮತ್ತು 15ನೇ ಹಣಕಾಸು ಆಯೋಗ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಸಸಿಗೆ ನೀರಿಯುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮ ಪಂಚಾಯತಿಯು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ಅನೇಕ ಯೋಜನೆಗಳನ್ನ ಜಾರಿಗೆ ತಂದಿದೆ ಅದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಎಂದರು.

ಪಿಡಿಒ ಎಂ.ಎಚ್. ಗಿರೀಶ್ ಮಾತನಾಡಿದರು. ಗ್ರಾಮ ಸಭೆಯಲ್ಲಿ 15ನೇ ಹಣಕಾಸು ಯೋಜನೆ ಮತ್ತು ರಾಜ್ಯ ಸರ್ಕಾರ ನೀಡಿರುವಂತಹ ಅನುದಾನದಲ್ಲಿ ಕುರಿತು ಚರ್ಚಿಸಲಾಗಿದೆ ನಾವು ಕಟ್ಟಿದಂತಹ ಟ್ಯಾಕ್ಸ್ ನಿಂದ ಸರ್ಕಾರ ಅದನ್ನು ತೆರಿಗೆ ಮೂಲಕ ವಸಲಿ ಮಾಡಿ ಗ್ರಾಮ ಪಂಚಾಯತಿಗೆ ನೀಡುತ್ತದೆ ಅನುದಾನದ ಮೂಲಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂದರು.

ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ. ಬೋರನಾಯಕ, ಕ್ಷೇತ್ರ ಸಮನ್ವಯ ಅಧಿಕಾರಿ ಹಾಗೂ ಗ್ರಾಮ ಸಭೆಯ ನೂಡಲ್ ಅಧಿಕಾರಿ ತಿಪ್ಪೇಸ್ವಾಮಿ ,ಎನ್ ಮಹದೇವಪುರ ಗ್ರಾಮ ಪಂಚಾಯತಿ
ಉಪಾಧ್ಯಕ್ಷೆ ಸೈಯದ್ ಅಖ್ತರ್ ಬಾನು. ಸದಸ್ಯರಾದ ಜಯಂತಿ ಪಿ.ಪಿ. ಶ್ವೇತ ಪಟೇಲ್ , ಎಂ. ಪಾಲಯ್ಯ,ಎಂ.ಓಬಳೇಶಪ್ಪ, ಎಚ್ ಶಿವಣ್ಣ, ಎಂ. ನಿರಂಜನ, ಆರ್ ಮಂಜುನಾಥ್, ತಿಪ್ಪಮ್ಮ,ಹಾಗೂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಸಾಮಾಜಿಕ ಪರಿಶೋಧನೆ ತಾಲೂಕು ಪಂಚಾಯಿತಿ ಚಳ್ಳಕೆರೆ ಆರ್ ಗಿರೀಶ್. ಸಾಮಾಜಿಕ ಪರಿಶೋಧನೆಯ ತಂಡ ರಂಜಿತ್ ಕುಮಾರ್ ಜಿ, ಬಿ.ಎನ್, ಧರ್ಮಚಂದ್ರ ಆರ್, ಲಕ್ಷೀ, ಆರ್ .ಸುಮಾ, ಸಂದೀಪ್, , ಕೆ.ನವೀನ ಕುಮಾರ್, ಅಭಿ,
ಗ್ರಾಮ ಪಂಚಾಯತಿ ಸಿಬ್ಬಂದಿ ಬಿಲ್ ಕಲೆಕ್ಟರ್ ಎಸ್ ಯೋಗೇಂದ್ರ, ಕಂಪ್ಯೂಟರ್ ಆಪರೇಟರ್ ತಿಪ್ಪೇರುದ್ರಪ್ಪ, ತಾಂತ್ರಿಕ ಸಹಾಯಕ ತಿಪ್ಪೇಸ್ವಾಮಿ, ಬಿ.ಎಫ್,ಟಿ
ಜಿ ಎಂ ಚಿದಾನಂದ, ಗ್ರಾಮ ಪಂಚಾಯಿತಿ ವ್ಯಾಪ್ತಿ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!