ಅದ್ದೂರಿಯಾಗಿ ನಡೆದ ಚಿಕ್ಕ ಕಾರ್ತಿಕೋತ್ಸವ ರಥೋತ್ಸವ.

ನಾಯಕನಹಟ್ಟಿ: ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರ ಕಾರ್ತಿಕೋತ್ಸವದ ಪ್ರಯುಕ್ತ ಸಂಭ್ರಮ ಹಾಗೂ ಸಡಗರದಿಂದ ಚಿಕ್ಕ ರಥೋತ್ಸವ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು.

ಉತ್ಸವ ಮೂರ್ತಿಗೆ ಚಿನ್ನದ ಕಿರೀಟ, ಚಿನ್ನದ ಸರ ತೊಡಿಸಲಾಗಿತ್ತು.

ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮಧ್ಯಾಹ್ನ 3.30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಒಳಮಠದ ಮಂಭಾಗದಿಂದ ಆರಂಭವಾದ ರಥೋತ್ಸವ ವಾರೋತ್ಸವ ಬೀದಿಯಲ್ಲಿ ಚಲಿಸಿತು.

ಭಕ್ತರು ರಥಕ್ಕೆ ತೆಂಗಿನಕಾಯಿ, ಬಾಳೆಹಣ್ಣು, ಚೂರುಬೆಲ್ಲ ಮೆಣಸು ಮಂಡಕ್ಕಿಯನ್ನು ಸಮರ್ಪಿಸಿದರು.

ಉತ್ಸವದಲ್ಲಿ ನಂದಿಧ್ವಜ, ಕರಡಿ ಮಜಲು ಸೇರಿದಂತೆ ದೇವಾಲಯದ ಸಾಂಪ್ರದಾಯಿಕ ವಾದ್ಯಗಳು ಇದ್ದವು.

ರಥವು ಅಂಜನೇಯಸ್ವಾಮಿ ದೇವರ ದೇವಾಲಯದ ಮಾರ್ಗದಲ್ಲಿ ಸಾಗಿ ವೀರಭದ್ರನ ಓಣಿಗೆ ಬಂದಾಗ ಹರಕೆ ಹೊತ್ತ ಯುವಕರು ಬಾಯಿಗೆ ಪಂಚಲೋಹ ಕಡ್ಡಿಗಳನ್ನು ಸಿಕ್ಕಿಸಿಕೊಂಡು ನೃತ್ಯ ಮಾಡಿ ಗಮನ ಸೆಳೆದರು.

ಇದೇ ವೇಳೆ ದೇವರಿಗೆ ಚಿನ್ನದ ಕಿರೀಟ, ಚಿನ್ನದ ಸರಗಳಿಂದ ಅಲಂಕಾರ ಮಾಡಿದ್ದರಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್‌.ಗಂಗಾಧರಪ್ಪ ಮಾತನಾಡಿದರು ಮಾಡಿದಷ್ಟು ನೀಡು ಭಿಕ್ಷೆ ಕಾಯಕವೇ ಕೈಲಾಸ ಎಂಬ ವಾಣಿಯನ್ನು ನಾಡಿಗೆ ಸಾರಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಣ್ಣ ಕಾರ್ತಿಕೋತ್ಸವ ರಥೋತ್ಸವ ಸಂಭ್ರಮದಿಂದ ನೂರಾರು ಭಕ್ತರು ಹಾಗೂ ಗ್ರಾಮದ ದೈವಸ್ಥರು ಮತ್ತು ಬಾಬುದಾರರು ಪೊಲೀಸ್ ಅಳಿಯ ಸಿಬ್ಬಂದಿಗಳ ಸಹಕಾರದಿಂದ ಮಧ್ಯಾಹ್ನ 3:30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ ದಿನಾಂಕ 27.11.2025ರಂದು ಲಕ್ಷ ದೀಪೋತ್ಸವ ಮತ್ತು ಬೆಳ್ಳಿ ರಥೋತ್ಸವ ಹಾಗೂ 28.11.2025 ರಂದು ದೊಡ್ಡ ಕಾರ್ತಿಕೋತ್ಸವ ಜರಗಲಿದ್ದು ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಎನ್ ಮಹಾಂತಣ್ಣ, ಬಿ. ವಿನುತಾ, ತಿಪ್ಪೇಶ್, ಗ್ರಾಮಸ್ಥರಾದ ಬಸಣ್ಣ, ವಿಜಯ್ ಕುಮಾರ್ ,ಸಿದ್ದೇಶ್ ದಳವಾಯಿ ರುದ್ರಮುನಿ, ಯೋಗೇಶ್, ಜಂಗಮ ಜ್ಯೋತಿ ತಿಪ್ಪೇಸ್ವಾಮಿ, ಸಿಬ್ಬಂದಿ ಎಸ್ ಸತೀಶ್, ಶಂಕರಪ್ಪ ,ಮನು, ರುದ್ರೇಶ್, ಅವರು ಇದ್ದರು

About The Author

Namma Challakere Local News
error: Content is protected !!