ಚಳ್ಳಕೆರೆ: ನಿವೇಶನಕ್ಕಾಗಿ ಆಹೋರಾತ್ರಿ ಧರಣಿ ಎಚ್ಚರಿಕೆ
ನೀಡಿದ ಸಂದೇಶ್
ಚಳ್ಳಕೆರೆ ಗಂಜಿಗುಂಟೆ ಗ್ರಾಮದ 60 ದಲಿತ ಕುಟುಂಬಗಳಿಗೆ
ನಿವೇಶನ ಮಂಜೂರು ಮಾಡದ ಹಿನ್ನೆಲೆಯಲ್ಲಿ, ನ. 17 ರಂದು
ಜಿಲ್ಲಾಡಳಿತದ ವಿರುದ್ಧ ಗೋಮಾಳದಲ್ಲಿ ರಾತ್ರಿ-ಹಗಲು ಧರಣಿ
ನಡೆಸುವುದಾಗಿ ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಸಂದೇಶ್
ಎಚ್ಚರಿಕೆ ನೀಡಿದ್ದಾರೆ. ದಲಿತ ಕುಟುಂಬಗಳು ನಿವೇಶನಕ್ಕಾಗಿ
ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ, ಅಧಿಕಾರಿಗಳು
ಮತ್ತು ಜನಪ್ರತಿನಿಧಿಗಳು ನೀಡಿದ ಭರವಸೆಗಳು ಈಡೇರಿಲ್ಲ ಎಂದು
ಅವರು ಹೇಳಿದರು.

