ಹೊಸದುರ್ಗ: ಜಲಾಶಯದ ಕೋಡಿಮಟ್ಟ ಇಳಿಸುವ
ವಿಚಾರ ಕೈ ಬಿಡಬೇಕು
ಹೊಸದುರ್ಗ ಶಾಸಕ ಬಿಜಿ ಗೋವಿಂದಪ್ಪ ಅವರು ಪದೇ ಪದೇ
ವಿವಿ ಸಾಗರ ಜಲಾಶಯದ ಕೋಡಿ ಮಟ್ಟವನ್ನು ತಗ್ಗಿಸುವಂತೆ
ಹೇಳುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ
ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ
ರಮೇಶ್ ಹೇಳಿದ್ದಾರೆ. ಶುಕ್ರವಾರ ಹಿರಿಯೂರಿನಲ್ಲಿ ಮಾತನಾಡಿದ
ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕುಡಿಯುವ ನೀರು
ಒದಗಿಸುತ್ತಿರುವ ಈ ಜಲಾಶಯವನ್ನು ರಕ್ಷಿಸಬೇಕು, ಹಾಳು
ಮಾಡಬಾರದು. ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ತಮ್ಮ
ಒಡವೆಗಳನ್ನು ಮಾರಿ ಹಣ ನೀಡಿದ್ದರು ಎಂದು ಅವರು ತಿಳಿಸಿದರು.

About The Author

Namma Challakere Local News
error: Content is protected !!