ಹೊಳಲ್ಕೆರೆ: ಚಿರತೆ ಹಿಡಿದು ಬದುಕಲು ಬಿಡಿ
ಹೊಳಲ್ಕೆರೆ ಕ್ಷೇತ್ರದ ಆಲಘಟ್ಟ ಗ್ರಾಮದಲ್ಲಿ ಚಿರತೆ ಹಾವಳಿ
ಹೆಚ್ಚಾಗಿದ್ದು, ಕೂಡಲೇ ಬೋನಿಟ್ಟು ಚಿರತೆಯನ್ನು ಹಿಡಿಯಬೇಕೆಂದು
ರೈತ ನಾಗರಾಜಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ
ಒತ್ತಾಯಿಸಿದ್ದಾರೆ. ಶುಕ್ರವಾರ ಲೋಕಲ್ ನೊಂದಿಗೆ ಮಾತನಾಡಿದ
ಅವರು, ಕಳೆದ ಮೂರು ದಿನಗಳಿಂದ ಚಿರತೆ ಕುರಿ ಮತ್ತು
ಹಸುವಿನ ಕರುಗಳನ್ನು ತಿಂದಿದೆ. ಅದರಿಂದ ತಪ್ಪಿಸಿಕೊಂಡು
ಬಂದಿದ್ದೇ ದುಸ್ಸಾಹಸ ಎಂದು ಹೇಳಿದ ನಾಗರಾಜಪ್ಪ, ಅರಣ್ಯ
ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಚಿರತೆ ಹಿಡಿಯಲು ಕ್ರಮ
ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

About The Author

Namma Challakere Local News
error: Content is protected !!