ಮೊಳಕಾಲ್ಕೂರು: ಮುಳ್ಳಿನ ಪೊದೆಯಲ್ಲಿ ಪತ್ತೆಯಾದ
ಅನ್ನ ಭಾಗ್ಯ ಅಕ್ಕಿ
ಬಡವರ ಹಸಿವು ನೀಗಿಸಲು ಜಾರಿಗೆ ತಂದಿದ್ದ ಅನ್ನಭಾಗ್ಯ
ಯೋಜನೆಯ ಅಕ್ಕಿ, ಬಡವರ ಪಾಲಾಗುವ ಬದಲು ಕಾಳಸಂತೆ
ದಂಧೆಕೋರರ ಪಾಲಾಗುತ್ತಿರುವುದು ಕಂಡುಬಂದಿದೆ.
ಮೊಳಕಾಲ್ಕೂರಿನ ಶಿರಕೋಳದ ಹೊರ ವಲಯದ ಮುಳ್ಳಿನ
ಪೊದೆಯಲ್ಲಿ ನೂರಾರು ಕೆ.ಜಿ. ಅನ್ನಭಾಗ್ಯದ ಅಕ್ಕಿಯನ್ನು
ಸಂಗ್ರಹಿಸಿಡಲಾಗಿತ್ತು. ಅಕ್ಕಿ ಬಳಿ ಯಾರೂ ಬರದಂತೆ ತಡೆಯಲು
ದಾರಿಯುದ್ದಕ್ಕೂ ಮುಳ್ಳಿನ ರಾಶಿ ಹಾಕಲಾಗಿತ್ತು. ಆದರೆ,
ಚಿತ್ರದುರ್ಗದ ಎಸಿ ಜಿಲಾನಿ ಹಾಗೂ ಪಿಎಸೈ ದಾಳಿ ನಡೆಸಿ ಈ
ಅಕ್ರಮ ಸಂಗ್ರಹವನ್ನು ಪತ್ತೆ ಹಚ್ಚಿದ್ದಾರೆ. ಈ ಅಕ್ಕಿ ಯಾರಿಗೆ
ಸಂಬಂಧಿಸಿದ್ದೆಂದು ತನಿಖೆ ನಡೆಯುತ್ತಿದೆ.

About The Author

Namma Challakere Local News
error: Content is protected !!