ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಹಲವೆಡೆ ವ್ಯಾಪಕ
ಮಳೆ ಸಾಧ್ಯತೆ
ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಹುತೇಕ ಕಡೆಗಳಲ್ಲಿ
ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ
ಇಲಾಖೆ ತಜ್ಞರು ಇಂದು ಮಾಹಿತಿ ನೀಡಿದ್ದಾರೆ. ಅಕ. 27ರಂದು
ಚಂಡಮಾರುತವಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ
ಕರಾವಳಿ ಜಿಲ್ಲೆಗಳಲ್ಲಿ ಅ.24 ರಿಂದ ಅ.30ರವರೆಗೆ ವ್ಯಾಪಕ ಮಳೆ
ಆಗುವ ಸಾಧ್ಯತೆ ಇದೆ. ಉತ್ತರ ಒಳನಾಡು ದಕ್ಷಿಣ ಒಳನಾಡು
ಜಿಲ್ಲೆಗಳಲ್ಲಿ ಅ.24ರಿಂದ ಅ.28ರವರೆಗೆ ಹಲವು ಕಡೆ ಮಳೆ
ಆಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಣ ಕನ್ನಡ,
ಬೀದರ್, ಕಲಬುರ್ಗಿ ಯಾದಗಿರಿ, ರಾಯಚೂರು, ಬಿಜಾಪುರ,
ಬಾಗಲಕೋಟೆ, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕೆಲವು
ಕಡೆ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಅ.24, 25, 26ರಂದು ಈ
ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ,
ಶಿವಮೊಗ್ಗ, ಉಡುಪಿ, ದಕ್ಷಣ ಕನ್ನಡ, ಚಿಕ್ಕಮಗಳೂರು, ಹಾಸನ,
ಕೊಡಗು, ತುಮಕೂರು, ಬೆಂಗಳೂರು ಚಿಕ್ಕಬಳ್ಳಾಪುರ, ಕೋಲಾರ,
ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ
ಜಿಲ್ಲೆಗಳಲ್ಲಿ ಅ.27ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

