ಭಕ್ತಿ ಮತ್ತು ನಂಬಿಕೆಗಳ ಸಂಗಮವೇ ನಮ್ಮ ಹಿಂದೂ ಧರ್ಮ : ಎನ್ ರಘುಮೂರ್ತಿ.
ನಾಯಕನಹಟ್ಟಿ: ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಕಾಳಿಕಾಂಬ ದೇವಿಯ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಮತ್ತು ನಂಬಿಕೆಗಳ ಸಂಗಮವೇ ನಮ್ಮ ಹಿಂದೂ ಧರ್ಮ ಎಂದು ಚಳ್ಳಕೆರೆ ನಿಕಟಪೂರ್ವ ತಹಶಿಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು ಇಂದು ಸನಾತನ ಸಂಸ್ಕೃತಿಯಲ್ಲಿ ಧಾರ್ಮಿಕ ಬೇರುಗಳು ಗಟ್ಟಿಯಾಗಿದೆ. ಎಲ್ಲಿ ದಾರ್ಮಿಕ ಮತ್ತು ಅಧ್ಯಾತ್ಮಿಕ ನೆಲೆಗಟ್ಟು ಗಟ್ಟಿಯಾಗಿರುತ್ತದೆ, ಅಲ್ಲಿ ಮನುಷ್ಯನ ಏಕಾಗ್ರತೆ ಮತ್ತು ಪ್ರಶಾಂತತೆ ಮನೆ ಮಾಡಿರುತ್ತದೆ. ಇಂದಿನ ವೈಜ್ಞಾನಿಕ ಯಾಂತ್ರಿಕ ಜೀವನದಲ್ಲಿ ಇಂತಹ ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಲ್ಲಿ ಮನುಷ್ಯನ ಏಕಾಗ್ರತೆ ಜಾಸ್ತಿಯಾಗಿ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಮನೆ ಮಾಡುತ್ತದೆ. ಹಾಗಾಗಿ ನಮ್ಮ ಪೂರ್ವಜರು ಹಾಕಿ ಕೊಟ್ಟಿರುವಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಅಡೆತಡೆ ಇಲ್ಲದೆ ಸಾಗಲಿ ಎಂದು ಆಶಿಸಿದರು.
ನಂತರ ಪಟೇಲ್ ಜಿ ತಿಪ್ಪೇಸ್ವಾಮಿ (ಎತ್ತಿನಹಟ್ಟಿ ಗೌಡ್ರು) ಮಾತನಾಡಿ ಗೌಡಗೆರೆ ಗ್ರಾಮದ ವಿಶ್ವಕರ್ಮ ಸಮಾಜದವರು ಎಷ್ಟೇ ಬಡತನ ಇದ್ದರೂ ಕೂಡ ಇಂಥದೊಂದು ಧಾರ್ಮಿಕ ಕಾರ್ಯಕ್ಕೆ ಕೈ ಹಾಕಿ ತಾಯಿ ಕಾಳಿಕಾದೇವಿಯ ಪ್ರತಿಷ್ಠಾಪನೆ ಮತ್ತು ಆರಾಧನೆ ನಮ್ಮೆಲ್ಲರಿಗೂ ಸ್ಪೂರ್ತಿ ತಂದಿದೆ ಎಂದು ಅಭಿನಂದಿಸಿದರು.
ಎಸ್ ಟಿ ಎಸ್ ಆರ್ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಎಂ ವೈ ಟಿ ಸ್ವಾಮಿ ಮಾತನಾಡಿ ಧಾರ್ಮಿಕ ತಪ್ಪೋ ಭೂಮಿ ಆದಂತ ನಾಯಕನಹಟ್ಟಿ ಹೋಬಳಿಯಲ್ಲಿ ಇಂತಹ ಆರಾಧನೆಗಳು ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಸಾಮರಸ್ಯ ಮೂಡುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌಡಗೆರೆ ವಿಶ್ವಕರ್ಮ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಹಾಗೂ ಗ್ರಾಮಸ್ಥರು ಇದ್ದರು.

