ಚಿತ್ರದುರ್ಗ: ನನಗೆ ಟಿಕೆಟ್ ನೀಡುವ ಭರವಸೆ ಇದೆ
ಮುಂಬರುವ ಆತ್ಮೀಯ ಪದವೀಧರ ಕ್ಷೇತ್ರದ ಚುನಾವಣೆಗೆ ತಾನು
ಆಕಾಂಕ್ಷಿಯಾಗಿರುವುದಾಗಿ, ತನ್ನ ಸೇವೆ ಪರಿಗಣಿಸಿ ಪಕ್ಷ ಈ ಬಾರಿ
ಟಿಕೆಟ್ ನೀಡುವ ಭರವಸೆ ಇದೆ ಎಂದು ಬಿಜೆಪಿಯ ಕಾನೂನು
ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ತಿಳಿಸಿದ್ದಾರೆ.
ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಅವರು, ಅರ್ಹರು ಮತದಾನ ಮಾಡಬೇಕು ಹಾಗೂ
ಮತದಾನಕ್ಕೆ ತಮ್ಮ ಹೆಸರು ನೊಂದಾಯಿಸಲು ಕೊನೆಯ ದಿನಾಂಕ
ಹತ್ತಿರದಲ್ಲಿದೆ ಎಂದು ಹೇಳಿದರು.

