ಚಿತ್ರದುರ್ಗ: ಹಲ್ಲೆಕೋರರ ಮೇಲೆ ಕ್ರಮ ಜರುಗಿಸಿ
ಚಿತ್ರದುರ್ಗದ ಮುದ್ದಾಪುರದಲ್ಲಿ ಬುಧವಾರ ಜಮೀನು ವಿವಾದಕ್ಕೆ
ಸಂಬಂಧಿಸಿದಂತೆ ತಿಪ್ಪಣ್ಣ ಎಂಬುವರ ಮೇಲೆ ಹಲ್ಲೆ ನಡೆದಿದೆ.
ಹಲ್ಲೆಗೊಳಗಾದ ತಿಪ್ಪಣ್ಣನ ಮಗ ವಿರೇಶ್, ಹಲ್ಲೆಕೋರರ ವಿರುದ್ಧ
ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಕೂಡ ಹಲ್ಲೆ ನಡೆದಿತ್ತು, ಆಗ ದೂರು ನೀಡಿದ್ದರೂ
ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಮತ್ತೆ ಹಲ್ಲೆ ನಡೆದಿದ್ದು,
ತಿಪ್ಪಣ್ಣನ ಕೈ ಮುರಿದು, ಬಾಯಿಗೆ ಗಾಯವಾಗಿದೆ. ಇದರಿಂದಾಗಿ
ಅವರಿಗೆ ಮಾತನಾಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ವಿರೇಶ್
ತಿಳಿಸಿದ್ದಾರೆ.

