ಚಿತ್ರದುರ್ಗ: ಹಸುವಿನ ಕರು ಕದ್ದೊಯ್ದ ಕಳ್ಳರು
ಚಿತ್ರದುರ್ಗದ ವಿದ್ಯಾನಗರದಲ್ಲಿ ಭಾನುವಾರ ರಾತ್ರಿ ಜಮೀನಿನಲ್ಲಿ
ಮೇಯುತ್ತಿದ್ದ ಹಸುವಿನ ಕರುವನ್ನು ದುಷ್ಕರ್ಮಿಗಳು ಕಾರಿನಲ್ಲಿ
ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಕೃತ್ಯ ಸಿಸಿಟಿವಿ
ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯ ವೈರಲ್ ಆಗಿದೆ. ಇಂತಹ
ಕೃತ್ಯಗಳನ್ನು ನಡೆಸುವ ತಂಡವೊಂದು ಸಕ್ರಿಯವಾಗಿದ್ದು,
ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು
ಆಗ್ರಹಿಸಿದ್ದಾರೆ.

