ಚಳ್ಳಕೆರೆ: ಶಾಶ್ವತ ಬರಗಾಲ ಜಿಲ್ಲೆಯೆಂದು ಘೋಷಿಸಿ
ಚಳ್ಳಕೆರೆ ತಾಲೂಕಿನಲ್ಲಿ ವಿಫಲವಾಗಿರುವ ಶೇಂಗಾ, ತೊಗರಿ
ಮತ್ತು ಈರುಳ್ಳಿ ಬೆಳೆಗೆ ತಾತ್ಕಾಲಿಕ ಪರಿಹಾರ ನೀಡಬೇಕು ಹಾಗೂ
ಚಿತ್ರದುರ್ಗ ಜಿಲ್ಲೆಯನ್ನು ಶಾಶ್ವತ ಬರಗಾಲ ಪೀಡಿತ ಪ್ರದೇಶವೆಂದು
ಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘವು ತಾಲೂಕು ಕಚೇರಿ
ಮುಂದೆ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯ ಮುಖಂಡ ಕೆ.ಪಿ.
ಭೂತಯ್ಯ ಮಾತನಾಡಿ, ಅತಿವೃಷ್ಟಿ-ಅನಾವೃಷ್ಟಿಯಿಂದ ಜಿಲ್ಲೆಯ
ರೈತರು ಹತ್ತು ವರ್ಷಗಳಿಂದ ನಿರಂತರ ನಷ್ಟ ಅನುಭವಿಸುತ್ತಿದ್ದಾರೆ
ಎಂದು ತಿಳಿಸಿದರು.

