ಸದೃಢ ಆರೋಗ್ಯಕ್ಕಾಗಿ ಕ್ರೀಡೆ ಸಹಕಾರಿ ಎಎಸ್ಐ ದಾದಾಪೀರ್.
ನಾಯಕನಹಟ್ಟಿ:: ಮಾದಕ ವಸ್ತುಗಳು ಜೀವಕ್ಕೆ ಅಪಾಯ ಎಂದು ಎಎಸ್ ಐ ದಾದಾಪೀರ್ ಹೇಳಿದರು.
ಭಾನುವಾರ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಕಾಲೇಜು ಕ್ರೀಡಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ನಾಯಕನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ನಶ ಮುಕ್ತ ಭಾರತ ಆಂದೋಲನ ಕುರಿತು ಯುವಕ ಮತ್ತು ಯುವತಿಯರಿಗೆ ಆಯೋಜಿಸಿದ್ದ ವಿವಿಧ ಕ್ರೀಡಾ ಕೂಟಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ಯುವಪೀಳಿಗೆ ಸದೃಢ ಆರೋಗ್ಯಕ್ಕಾಗಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಚಿತ್ರದುರ್ಗ ಜಿಲ್ಲೆ ಹಾಗೂ ನಾಯಕನಹಟ್ಟಿ ಹೋಬಳಿ ನಶಾ ಮುಕ್ತ ವಾಗಬೇಕಾದರೆ ಯುವಕರು ಮಾದಕ ವಸ್ತುಗಳಾದ ಮಧ್ಯ ಗುಟ್ಕಾ ಗಾಂಜಾ ಇಂತಹ ಮಾದಕ ನಶೆ ವಸ್ತುಗಳಿಂದ ದೂರ ಇರಬೇಕು ಉತ್ತಮ ಆರೋಗ್ಯವಂತರಾಗಿರಲು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ ಸದೃಢ ಆರೋಗ್ಯವಂತರಾಗಿ ಇರಬೇಕು ಎಂದರು.
ಇನ್ನೂ ನಶ ಮುಕ್ತ ಭಾರತ ಅಭಿಯಾನದಲ್ಲಿ 150ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಿದ್ದರು.
ಅಕ್ಟೋಬರ್ 26ರಂದು ಚಿತ್ರದುರ್ಗ ಪೊಲೀಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಹೋಬಳಿಯ 15 ಯುವಕರು ಹಾಗೂ 10 ಯುವತಿಯರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ, ಎಎಸ್ಐ ಆರ್ ಕೆ ತಿಪ್ಪೇಸ್ವಾಮಿ, ಹೆಡ್ ಕಾನ್ಸ್ಟೇಬಲ್ ಭಾಷಾ, ರಾಘವೇಂದ್ರ, ಪೊಲೀಸ್ ಪೇದೆಗಳಾದ ಅಣ್ಣಪ್ಪ ನಾಯ್ಕ, ರಾಜು, ಶಿವಣ್ಣ, ರುದ್ರಪ್ಪ, ಕುಮಾರ್, ದೇವರಾಜ್ ಕೋಟೆ, ರಾಘವೇಂದ್ರ, ಮಂಜು, ಕ್ರೀಡಪಟುಗಳು ಪಟ್ಟಣ ಹಾಗೂ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು

