ಮನಸೂರೆಗೊಂಡ ಸುಗಮ ಸಂಗೀತ ಕಾರ್ಯಕ್ರಮ
ಚಳ್ಳಕೆರೆ : ತಾಲ್ಲೂಕಿನ ಮಲ್ಲೂರಹಳ್ಳಿ ಗ್ರಾಮದಲ್ಲಿ ಜೈಭೀಮ್ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ಸಂಘದ ವತಿಯಿಂದ ಕನ್ನಡ & ಸಂಸ್ಕೃತಿ ಇಲಾಖೆ ಚಿತ್ರದುರ್ಗ ಇವರ ಸಹಕಾರದಲ್ಲಿ ಶಿವಕುಮಾರ್ ಟಿ & ತಂಡದಿಂದ ನಡೆದ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರು ಹಾಗೂ ಮಾಜಿ ಉಪಾಧ್ಯಕ್ಷರಾದ ಬಿ ಕಾಟಯ್ಯರವರು ಸಂಗೀತವು ನೊಂದ ಮನಸ್ಸಿಗೆ ದಿವ್ಯ ಔಷಧಿ ಇದ್ಧಂತೆ , ನಮ್ಮ ಗ್ರಾಮದ ಕಲಾವಿದರು ಹಂಪಿ ಉತ್ಸವ ದ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ನಮ್ಮ ಗ್ರಾಮದ ಕಲಾವಿದರದು ಹಾಗೂ ಇಂತಹ ಕಲಾವಿದರ ಕಲಾದೇವತೆಯ ಸೇವೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ ,
ಇಂತಹ ಕಲಾವಿದರ ನಿರಂತರ ಸೇವೆಗಾಗಿ ಸರ್ಕಾರ ಇಂತಹ ಕಾರ್ಯಕ್ರಮದ ಮೂಲಕ ಸಹಕಾರ ನೀಡಿ ಪ್ರೋತ್ಸಾಹ ಮಾಡಬೇಕು ಎಂದರು ,
ಕಾರ್ಯಕ್ರಮದಲ್ಲಿ ನಲಜರುವಮ್ಮ ಗ್ರಾಮ ಪಂಚಾಯಿತಿ ಸದಸ್ಯರು, ಮಲ್ಲೇಶಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, STMRHS ಶಾಲೆಯ ಸಹ ಶಿಕ್ಷಕರು ಪರ್ವತಯ್ಯ ಮತ್ತು ನಾಗರಾಜ ಗ್ರಾಮದ ಮುಖಂಡರು ಮಲ್ಲಿಕಾರ್ಜುನ ಗೌಡ, ದಿನೇಶ್ ಸಿ, ಸಂಘದ ಕಾರ್ಯದರ್ಶಿ ಕೋನಸಾಗರ ಶಿವು, ಗ್ರಾಮದ ಕಲಾವಿದರಾದ ತಿಪ್ಪೇಶ್ ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕಿ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರಾದ ಕುಮಾರಿ ಪ್ರಿಯಾಂಕ ಕೊಟ್ಟೂರು, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರಾದ ನುಂಕೇಶ್ ಓಬಳಶೆಟ್ಟಿಹಳ್ಳಿ, ಕಲಾವಿದರಾದ ಯಲ್ಲಪ್ಪ ಸಕಲಾಪುರದಹಟ್ಟಿ, ನವೀನ್ ಹಿರೇಹಳ್ಳಿ, ರಾಜು ಕುರಿಹಟ್ಟಿ, ತಿಪ್ಪೇಸ್ವಾಮಿ ಅಬ್ಬೇನಹಳ್ಳಿ, ಶಂಕರೇಶ್ ಕೋನಸಾಗರ, ಹಂಪಣ್ಣ ಓ ಮಲ್ಲೂರಹಳ್ಳಿ, ಕೀಬೋರ್ಡ್ ವಾದನದಲ್ಲಿ ಮಂಜುನಾಥ ಹೆಚ್ ಕೆ ಹಳ್ಳಿ, ರಿದಂ ಪ್ಯಾಡ್ ವಾದನದಲ್ಲಿ ವೆಂಕಟೇಶ ಗಿಡ್ಡಾಪುರ, ಕಾರ್ಯಕ್ರಮವನ್ನು ಗಾಯಕ ಹಾಗೂ ನಿರೂಪಕ ನೀಲಪ್ಪ ತೂಲಹಳ್ಳಿ ನಿರ್ವಹಿಸಿದರು, ಪ್ರಸನ್ನಕುಮಾರ್ ಸ್ವಾಗತಿಸಿದರು , ಗಾಯಕ ಶಿವಕುಮಾರ ವಂದಿಸಿದರು.

