ಚಳ್ಳಕೆರೆ :*ಬಿಜೆಪಿ ಮುಖಂಡ ಪ್ರಭಾಕರ ಮ್ಯಾಸನಾಯಕ ಅವರ ಆಗ್ರಹಕ್ಕೆ ಸ್ಪಂದಿಸಿ ದೇವಸಮುದ್ರ ಗ್ರಾಮದ ಚರಂಡಿ ಸ್ವಚ್ಛ ಗೊಳಿಸುತ್ತಿರುವ ಪಿಡಿಒ
ದೇವಸಮುದ್ರ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಹಾದು ಹೋಗಿರುವ ರಾಜ ಗಾಲವೆಯಲ್ಲಿ ತುಂಬಿ ತುಳುಕುತ್ತಿರುವ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಸ್ವಚ್ಛ ಮಾಡಿಸಿದೆ ಇರುವುದನ್ನು ಗಮನಿಸಿದ ಬಿಜೆಪಿ ಮುಖಂಡ ಪ್ರಭಾಕರ್ ಮ್ಯಾಸ ನ್ಯಾಯಕ ಅವರು ಪತ್ರಿಕಾ ಹೇಳಿಕೆ ನೀಡಿ ಪಿಡಿಒ ಅಮಾನತ್ತಿಗೆ ಅಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಜೆಸಿಬಿ ತಂದು ಸ್ವಚ್ಛಗೊಳಿಸುತ್ತಿರುವ ದೇವ ಸಮುದ್ರ ಪಿಡಿಒ
ಪತ್ರಿಕಾ ಹೇಳಿಕೆ ಗಮನಿಸಿ ತುರ್ತಾಗಿ ಸ್ವಚ್ಛಗೊಳಿಸಲು ಆದೇಶ ನೀಡಿರುವ ಜಿಲ್ಲಾ ಪಂಚಾಯತ್(ಸಿಇಒ) ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಭಾಕರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

