ಚಳ್ಳಕೆರೆ : ವೇತನ ಮತ್ತು ಪಿಎಫ್. ಇಎಸ್ ಐ ಹೆಚ್ಚಳ ಮಾಡುವಂತೆ ಸಾಜಿಟರ್ ಕಂಪನಿ ವಿರುದ್ದ ಎನ್.ದೇವರಹಳ್ಳಿ ಗ್ರಾಪಂ ವ್ಯಾಪ್ತಿಯ ನೇರ್ಲಗುಂಟೆ ಸಮೀಪವಿರುವ ಸಾಜಿಟರ್ ಸೋಲರ್ ಕಂಪನಿ ಮುಂದೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.

ಸಾಜಿಟರ್ ಕಂಪನಿಯಲ್ಲಿ 18 ಜನ ನೌಕರರು 9 ವರ್ಷಗಳಿಂದ 8ರಿಂದ 12 ಸಾವಿರ ವೇತನಕ್ಕೆ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೆ ಅಕ್ಟೋಬರ್ ಮಾಹೆಯಿಂದ ವೇತನ ಹೆಚ್ಚಳ ಮಾಡುತ್ತೇವೆಂದು ಕಂಪನಿ ಮಾಲೀಕರು ಹೇಳಿದ್ದರು. ಪಕ್ಕದಲ್ಲಿರುವ ಪೋರ್ಟ್ ನ, ಇನ್ ಸೋಲಾರ್, ಎಪ್ಲೆಸ್ , ಗ್ರೀಂಕ್ ಕಂಪನಿಯವರು 1550 ರೂ ವೇತನ ಇ.ಎಫ್. ಇಎಸ್ ಐ ನೀಡುತ್ತಿದ್ದಾರೆ. ಆದರೆ ನಮ್ಮ ಕಂಪನಿಯಲ್ಲಿ ವೇತನ ಹೆಚ್ಚಳ ಮಾಡದೆ ಹಳೆ ಮಾದರಿಯಲ್ಲಿ ವೇತನವನ್ನು ಖಾತೆಗೆ ಜಮೆ ಮಾಡಿದ್ದಾರೆ. ಪಿಎಫ್. ಇಎಸ್ ಐ ನೀಡುತ್ತಿಲ್ಲ, ಕೂಡಲೇ ನಮಗೆ ವೇತನ ಹೆಚ್ಚಳ ಮಾಡಬೇಕು ಎಂದು ಸೋಲಾರ್ ಕಂಪನಿಯ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ….
ಈ ವೇಳೆ ನೌಕರರಾದ ರವೀಂದ್ರ, ಭರತೇಶ್, ಕಾಟಯ್ಯ, ಉಮೇಶ್, ಬೊಮ್ಮಯ್ಯ ಬೋರೇಶ್, ಪಾಲಯ್ಯ, ಮಂಜು, ಸ್ವಾಮಿ, ಅಜಿತ್ ಕುಮಾರ್, ನಾಗರಾಜ್, ಸಮೀವುಲ್, ಗೋಪಿ ಸೇರಿದಂತೆ ಮುಂತಾದವರು ಇದ್ದರು….

About The Author

Namma Challakere Local News
error: Content is protected !!