₹ 2. ಕೋಟಿ ವಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಟಿ ರಘುಮೂರ್ತಿ.
ಚಳ್ಳಕೆರೆ : ಬುಡಕಟ್ಟು ಜನಾಂಗದವರು ಹೆಚ್ಚು ಇರುವ ನನ್ನಿವಾಳ ಗ್ರಾಮದಲ್ಲಿ ಸು.ಎರಡು ಕೋಟಿಗೂ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಮಾಡಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅಚರು ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡ ಹಾಗೂ ಇತರೆ ಕಾಮಗಾರಿಗಳ ಉದ್ಘಾಟನೆ ಹಾಗೂ ನೂತನ ಗ್ರಾಮ ಪಂಚಾಯತಿ ಸಭಾಂಗಣ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಮೂರು ಬಾರಿ ಮತದಾರರು ನನ್ನ ಮೇಲೆ ವಿಶ್ವಸ ತೋರಿಸಿ ಆಯ್ಕೆ ಮಾಡಿದ ಇವರಗಳ ಋಣ ತೀರಿಸಲು ಸದಾ ಬದ್ದನಾಗಿದೆನೆ , ಕಳೆದ ಅದಿಮೂರು ವರ್ಷಗಳಿಂದ ವಿವಿಧ ಕಾಮಗಾರಿಗಳನ್ನು ಮಾಡುತ್ತಾ ಮೂಲಭೂತ ಸೌಲಭ್ಯಗಳನ್ನು ನೀಡಿದ್ದೆವೆ ಎಂದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಅರಿವ ನೀರಿನಂತೆ ನಡೆಯುತ್ತಿರಬೇಕು ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿ ನನ್ನ ಗೆಲುವಿಗೆ ಕಾರಣವಾದ ಮತದಾರರಿಗೆ ಧನ್ಯವಾದ, ಗ್ರಾಮ ಪಂಚಾಯತಿ ಮತದಾರರು ನನಗೆ ಮತ ನೀಡಿದ್ದಾರೆ ಅವರ ಋಣ ತೀರಿಸಲು ಅಭಿವೃದ್ಧಿ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಪಿಡಿಓ ಇನಾಯಿತ್ ಪಾಷ,
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಮ್ಮ ರಾಜಣ್ಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಿ.ಪಿ. ಪ್ರಕಾಶ್ ಮೂರ್ತಿ, ನಗರಸಭೆ ಅಧ್ಯಕ್ಷೆ ಶಿಲ್ಪ ಮುರಳಿಧರ್, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೆ ಬಿ. ತಿಪ್ಪೇಸ್ವಾಮಿ, ತಹಶೀಲ್ದಾರ್ ರೇಹಾನ್ ಪಾಷಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಎಚ್ ಶಶಿಧರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೇಬಿಜಾನ್ ದಾದಾಪೀರ್, ಸದಸ್ಯರಾದ ಸಣ್ಣ ಬೋರಮ್ಮ ದೊರೆ ಬೈಯಣ್ಣ, ಓ ಚಿನ್ನಯ್ಯ, ದೊರೆ ಬೈಯಣ್ಣ, ಓ.ಓಬಯ್ಯ, ಜಯಮ್ಮ ಜಯಚಂದ್ರ, ಜಿ ಬಸವರಾಜ್, ವೈ ಪಾರಿಜಾತ ಶಿವಣ್ಣ, ಸೈಯದ್ ಸೆಮಿವುಲ್ಲಾ, ಕೆ.ಓಬಯ್ಯ, ಬೋರಮ್ಮ ಕೆ.ಟಿ.ಪಾಲಯ್ಯ, ಸಿ ರವಿ, ಚಿಂತಲ ಪಾಪಮ್ಮ ಸಣ್ಣ ಓಬಯ್ಯ, ಶಾರದಮ್ಮ ಪಾಪಣ್ಣ, ಸಾವಿತ್ರಮ್ಮ ಬೋರಯ್ಯ, ಗೀತಾ ಪಾಪಣ್ಣ, ಜಿ ತಿಪ್ಪೇಸ್ವಾಮಿ, ದೊಡ್ಡ ಬೈಯಣ್ಣ, ಸಿ.ಓಬಯ್ಯ, ಅಕ್ಷತಾ ಜಗದೀಶ್, ಈರಮ್ಮ ತಿಪ್ಪೇಸ್ವಾಮಿ, ಜಯಮ್ಮ ಮುಕುಂದಪ್ಪ, ಎ ನಾಗರಾಜು, ಪ್ರಭಾವತಿ ಚಿನ್ನಯ್ಯ, , ಸೇರಿದಂತೆ ನನ್ನಿವಾಳ ಗ್ರಾಮ ಪಂಚಾಯತಿ ಸಮಸ್ತ ಗ್ರಾಮಸ್ಥರು ಇದ್ದರು.

