ಚಳ್ಳಕೆರೆ :
ಮೊಳಕಾಲ್ಮುರು ತಾಲ್ಲೂಕು ಬಿ. ಜಿ ಕೆರೆ, ಕೊಂಡ್ಲಹಳ್ಳಿ ಮತ್ತು ಕೋನಸಾಗರ ಚಳ್ಳಕೆರೆ ತಾಲ್ಲೂಕು ತಳಕು, ಎನ್. ಮಹಾದೇವಪುರ ಮತ್ತು ಚಿತ್ರದುರ್ಗ ತಾಲ್ಲೂಕು ತುರುವನೂರು ಮತ್ತು ಕೂನಬೇವು ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಆಕಾಶ್. ಎಸ್
ದಿಡೀರ್ ಭೇಟಿ…ನೀಡಿ ಪರಿಶೀಲನೆ ನಡೆಸಿದರು.
ಕಾಮಗಾರಿಗಳ ಕಡತ, ಹಾಜರಾತಿ ಕಡತಗಳ ಪರಿಶೀಲಿಸಿದರು…
ಗ್ರಾಮ ಪಂಚಾಯತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿಗೆ ಸಕಾಲದಲ್ಲಿ ಹಾಜರಿದ್ದು…
ಸಾರ್ವಜನಿಕರುಗಳಿಗೆ ಕುಡಿಯುವ ನೀರು ಗ್ರಾಮಗಳ ಸ್ವಚ್ಛತೆ, ನೈರ್ಮಲ್ಯವನ್ನು ಕಾಪಾಡುವಲ್ಲಿ ಗ್ರಾಮ ಪಂಚಾಯತಿಗಳ ಸಿಬ್ಬಂದಿಗಳ ಕಾರ್ಯ ಬಹಳ ಪ್ರಮುಖವಾದದ್ದು.ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ಸೂಚಿಸಿದರು.
ಹಾಗೇ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಒಣ ಮತ್ತು ಹಸಿ ಕಸವನ್ನು ಬೆರ್ಪಡಿಸಿ, ಸುತ್ತಲಿನ ಜಾಗವನ್ನು ಸ್ವಚ್ಛತೆ ಕಾಪಾಡಬೇಕು ಎಂದರು..
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಜನಪ್ರತಿನಿದಿಗಳು ಸಾರ್ವಜನಿಕರುಗಳು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳು/ ಸಿಬ್ಬಂದಿಗಳು ಉಪಸ್ಥಿತರಿದ್ದರು.

