ಚಳ್ಳಕೆರೆ :ಮೊಳಕಾಲ್ಕೂರು: ಕಳ್ಳರ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆ

ಮೊಳಕಾಲ್ಕೂರಿನ ರಾಂಪುರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬೀಗ
ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳರು ನುಗ್ಗಿ, ಚಿನ್ನಾಭರಣ
ಹಾಗೂ ಹಣ ದೋಚಿ ಪರಾರಿಯಾಗುತ್ತಿದ್ದಾರೆ.

ರಾಂಪುರದ
ಕುಬೇರ ನಗರದ ದಯಾನಂದ್ ಅವರ ಮನೆಯಲ್ಲಿ ಕಳೆದ ರಾತ್ರಿ
ಕಳ್ಳರು ನುಗ್ಗಿ, ಟ್ರಂಕ್‌ಗಳಲ್ಲಿದ್ದ ಸುಮಾರು 3.40 ಲಕ್ಷ ಮೌಲ್ಯದ
ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರ
ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಾಂಪುರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!