ಚಳ್ಳಕೆರೆ : ಕುರುಬ ಸಮುದಾಯವನ್ನು ಎಸ್.ಟಿ.(ನಾಯಕ) ಸಮುದಾಯಕ್ಕೆ ಸೇರಿಸುವ ಮುಖ್ಯಮಂತ್ರಿಗಳ ಪ್ರಸ್ತಾವನೆಯನ್ನು ವಿರೋಧಿಸಿ ಚಳ್ಳಕೆರೆ ನಗರದಲ್ಲಿ ನಾಯಕ ಸಮುದಾದಿಂದ ಅ.4 ರಂದು ಬೃಹತ್ ಪ್ರತಿಭಟನೆ

ನಾಯಕ ಸಮುದಾಯದ ಮುಖಂಡ, ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ,
ಕುರುಬ ಸಮುದಾಯವನ್ನು ಎಸ್.ಟಿ.(ನಾಯಕ)
ಸಮುದಾಯಕ್ಕೆ ಸೇರಿಸುವ ಮುಖ್ಯಮಂತ್ರಿಗಳ ಪ್ರಸ್ತಾವನೆಯನ್ನು ವಿರೋಧಿಸಿ ಚಳ್ಳಕೆರೆ ತಾಲ್ಲೂಕು ನಾಯಕ
ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ.

, ತಾಲ್ಲೂಕಿನ ಎಲ್ಲಾ ನಾಯಕ ಸಮುದಾಯದ ಹೋರಾಟಗಾರರು, ಮುಖಂಡರು, ಭಾಗವಹಿಸಿ, ಪ್ರತಿಭಟನೆ ಯಶಸ್ವಿ ಗೊಳಿಸಬೇಕು ಎಂದು ಕರೆ ನೀಡಿದರು.

ಅ.4 ರಂದು ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತ ಹಾಗೂ ತಾಲೂಕು ಕಛೇರಿ ಬೃಹತ್ ಪ್ರತಿಭಟನೆ ..

ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ತಾಲ್ಲೂಕು ಸಮಸ್ತ ನಾಯಕ
ಸಮುದಾಯದ ಮುಖಂಡರು, ಕಾರ್ಮಿಕರು, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಎಲ್ಲರೂ
ಭಾಗವಹಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಿದರು.

ಇದೇ ಸಂಧರ್ಭದಲ್ಲಿ ಪಿಟಿ ತಿಪ್ಪೇಸ್ವಾಮಿ, ಸಿಟಿ ಶ್ರೀನಿವಾಸ್, ಸಂದೀಪ್ ಸೂರ್ಯ, ಸ್ವಪ್ನ ವೆಂಕಟೇಶ್, ವಕೀಲ ಬೋರಣ್ಣ, ಪ್ರಶಾಂತ್, ಮಂಜುಣ್ಣ, ಪ್ರಸನ್ನ ಮದಕರಿ, ಸುಧಾಕರ್, ಸುರೇಶ್,
ಸೋಮು, ನವೀನ್, ಗಾಡಿ ತಿಪ್ಪೇಸ್ವಾಮಿ, ಡಾ.ಲೋಕೇಶ್, ಡಾ.ಮಂಜುನಾಥ್, ಇತರ ಸಮುದಾಯದ ಮುಖಂಡರು ಹಾಜರಿದ್ದರು.

About The Author

Namma Challakere Local News
error: Content is protected !!