ಚಳ್ಳಕೆರೆ :

ಮನುಷ್ಯನ ಜೀವ ಉಳಿಸುವ
ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸಲು ಕಾರಣವಾಗುವ ರಕ್ತವನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ’ ಎಂದು ಜಗದೀಶ್ ಆಚಾರ್ ಹೇಳಿದರು.

ನಗರದ ಪವನ್ ಕಲ್ಯಾಣ್ ಒ ಜಿ ಸಿನಿಮ ಬಿಡುಗಡೆ ಪ್ರಯುಕ್ತ ನಗರದ ಬಾಲಾಜಿ ಆಸ್ಪತ್ರೆ ರಕ್ತ ಕೇಂದ್ರ ಹಾಗೂ ಅಭಿಮಾನಿಗಳಿಂದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಉಚಿತ ರತ್ತದಾನ ಶಿಭಿರದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಅನೇಕ ಜಾತಿ ಮತಗಳನ್ನು ಎಣಿಸುತ್ತೇವೆ. ಆದರೆ ಎಲ್ಲರ ರಕ್ತದ ಬಣ್ಣ ಒಂದೇ ಆಗಿದ್ದು ಜಾತಿ ಭೇದವಿಲ್ಲ. ತುರ್ತು ಅಗತ್ಯದ ಸಂದರ್ಭದಲ್ಲಿ ರಕ್ತ ಮುಖ್ಯವಾಗುತ್ತದೆಯೇ ಹೊರತು ಅದು ಯಾವ ಜಾತಿಯವರದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಸಮಾಜದಲ್ಲಿ ಎಲ್ಲ ಸಮುದಾಯಗಳ ಜನರು ಸಹೋದರತ್ವ, ಭ್ರಾತೃತ್ವದೊಂದಿಗೆ ಜೀವನ ನಡೆಸಬೇಕು,
ಆರೋಗ್ಯವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಧರ್ ಆಚರ್ಯ.ಮಂಜುನಾಥ್.ತಿಪ್ಪೇಸ್ವಾಮಿ ಇತರರಿದ್ದರು.

About The Author

Namma Challakere Local News
error: Content is protected !!