ಚಳ್ಳಕೆರೆ :ಚಳ್ಳಕೆರೆ: ರಸ್ತೆ ಗುಂಡಿಗಳು ಸರ್ಕಾರದ ನಿರ್ಲಕ್ಷ ಖಂಡನೆ
ಚಳ್ಳಕೆರೆಯಲ್ಲಿ ದಿನನಿತ್ಯ ತಗ್ಗುಗುಂಡಿಗಳಿಂದ ತುಂಬಿದ ರಸ್ತೆಗಳಲ್ಲಿ
ವಾಹನ ಸವಾರರು ಸಂಚರಿಸಿ ಅಪಘಾತಕ್ಕೀಡಾಗುತ್ತಿದ್ದಾರೆಂದು
ಚಳ್ಳಕೆರೆ ಬಿಜೆಪಿ ಮಂಡಲಾಧ್ಯಕ್ಷ ಸುರೇಶ್ ಆರೋಪಿಸಿದ್ದಾರೆ.
ಚಳ್ಳಕೆರೆಯಲ್ಲಿಂದು ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ
ಮಾತನಾಡಿದ ಅವರು, ರಾತ್ರೋ ರಾತ್ರಿ ರಸ್ತೆಯ ಗುಂಡಿಗಳನ್ನು
ಮುಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಅಲ್ಲದೆ,
ಸರ್ಕಾರ ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ಸಾಮಾಜಿಕ,
ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತಿದೆ ಎಂದು ಅವರು
ಆರೋಪಿಸಿದರು.

