ಚಳ್ಳಕೆರೆ :ಹೊಸದುರ್ಗ: ಬಿಸಿಎಂ ಅಧಿಕಾರಿಗೆ ತರಾಟೆ
ತೆಗೆದುಕೊಂಡ ಸಂಸದರು
ಚಿತ್ರದುರ್ಗದಲ್ಲಿ ನಡೆದ ದಿಶಾ ಸಭೆಯಲ್ಲಿ, ಹೊಸದುರ್ಗದ ಬಿಸಿಎಂ
ಹಾಸ್ಟೆಲ್ ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳ
ಕುರಿತು ಸಂಸದ ಗೋವಿಂದ ಕಾರಜೋಳ ಅವರು ಬಿಸಿಎಂ
ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಭೇಟಿ
ನೀಡಿ ಸಮಸ್ಯೆ ಬಗೆಹರಿಸಿದ್ದಾಗಿ ತಿಳಿಸಿದಾಗ, ಇಂತಹ ಘಟನೆಗಳು
ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸಂಸದರು ಸೂಚಿಸಿದರು.

