ಚಳ್ಳಕೆರೆ :
ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡು ಐಕ್ಯತಾ ಭಾವನೆ, ಭ್ರಾತೃತ್ವ ಹಾಗೂ ದೇಶ ಬೆಳವಣಿಗೆ ಎಡೆಗೆ ತಮ್ಮ ಕೊಡುಗೆಯನ್ನು ನೀಡಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಡಾ.ಎಂ.ಕೆ.ದೇವಪ್ಪ ಹೇಳಿದರು.
ಅವರು ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚರಣೆಯನ್ನು ,
ಎನ್ ಎಸ್ ಎಸ್ ಘಟಕದ ಸಮಾರಂಭದಲ್ಲಿ ಭಾಗವಹಿಸಿ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಾನಂದಯ್ಯ, ಐಕ್ಯೂಎಸ್‌ಸಿ ಘಟಕದ ಸಂಚಾಲಕರಾದ ಚನ್ನಕೇಶವ ಆರ್. ಎನ್., ಅಧ್ಯಾಪಕರ ವೇದಿಕೆಯ ಕಾರ್ಯದರ್ಶಿಯವರಾದ ನಾಗರಾಜ್ ವಿ, ಎನ್ಎಸ್ಎಸ್ ಘಟಕದ ಘಟಕ ಅಧಿಕಾರಿಗಳಾದ ವಿಜಯಕುಮಾರ್ ಟಿ ಹಾಗೂ ಕೃಷ್ಣಮೂರ್ತಿ ಪಿ ಭಾಗವಹಿಸಿದ್ದರು.

