ಚಳ್ಳಕೆರೆ :
ಜಾತಿ ಗಣತಿ ಮಾಡಲು ಹೋದ ಶಿಕ್ಷಕರಿಗೆ ಬಿಸಿತಟ್ಟಿಸಿದ ಮನೆ ಮಾಲಿಕ
ಸರ್ಕಾರದ ಆದೇಶದ ಮೇರೆಗೆ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ತಾಲೂಕ ಆಡಳಿತ ಹಾಗೂ ಶಿಕ್ಷಣ ಇಲಾಖೆ ವೈಫಲ್ಯ ತೋರಿದೆ,
ಚಳ್ಳಕೆರೆ ಶಾಂತಿನಗರದ ಶಿಕ್ಷಕರು ಜಾತಿ ಸಮೀಕ್ಷೆ ಮಾಡುವ ವೇಳೆ ಏಕಾಏಕಿ ಮನೆಗೆ ಹೋದಾಗ ಮನೆ ಮಾಲಿಕ ಜೋಸೆಫ್ ಮಾತನಾಡಿ ನೀವು ಯಾರು? ಯಾವ ಉದ್ದೇಶದಿಂದ ಬಂದಿದ್ದೀರಾ ಸುಖ ಸುಮ್ಮನೆ ಮನೆ ಒಳಗೆ ಪ್ರವೇಶ ಮಾಡಬಾರದು ನೀವು ಶಿಕ್ಷಕರಾದರೆ ಜಾತಿಗಣತಿಯ ನಾಮಫಲಕ ತೋರಿಸಿ ಇಲ್ಲವೇ ಸರಕಾರದಿಂದ ಕೊಡುವ ಬಿ ಓ ಲೆಟರ್ ತೋರಿಸಿ ಎಂದು ಪ್ರಶ್ನಿಸಿದಾಗ ತಬ್ಬಿಬಳಾದ ಶಿಕ್ಷಕರು ಜಾತಿ ಗಣತಿ ಮಾಡದೆ ಹೊರ ಬಂದಿದ್ದಾರೆ
ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಜಾತಿ ಸಮೀಕ್ಷೆಗೆ ತೆರಳಿರುವ ಶಿಕ್ಷಕರಿಗೆ ಯಾವುದೇ ರೀತಿಯ ಭದ್ರತಾ ಐಡಿಗಳನ್ನು ಕೊಡದೆ ಏಕಾಏಕಿ ಮನೆಗೆ ಹೋಗಿರುವ ಹಿನ್ನೆಲೆ ಮನೆಮಾಲೀಕ ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಗಮನಿಸಿ,
ಇತ್ತೀಚಿನ ದಿನಗಳಲ್ಲಿ ಕಳ್ಳತನ ದರೋಡೆ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರು ಅಪರಿಚಿತ ವ್ಯಕ್ತಿಗಳನ್ನು ಮನೆ ಒಳಗೆ ಬಿಟ್ಟುಕೊಳ್ಳುವುದಿಲ್ಲ ಈ ನಿಟ್ಟಿನಲ್ಲಿ ತಾಲೂಕ ಆಡಳಿತ ಶಿಕ್ಷಣ ಇಲಾಖೆ ನೇಮಕಗೊಂಡಿರುವ ಶಿಕ್ಷಕರಿಗೆ ಆಡಿ ಕಾರ್ಡು ಕೊಡದೆ ಇರುವುದು ವಿಪರ್ಯಾಸವಾಗಿದೆ,
ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ವಿಷಯವನ್ನು ಪರಿಗಣಿಸಿ ಶಿಕ್ಷಕರಿಗೆ ಬದ್ರತೆ ಕೊಡುವರೆ ಕಾದು ನೋಡಬೇಕಾಗಿದೆ,

