“ಸಕಾರಾತ್ಮಕ ಚಿಂತನೆಗಳ ಅನುಷ್ಠಾನದಿಂದ ದಿನಚರಿ ದಿವ್ಯ”:-ಶ್ರೀಮತಿ ರಶ್ಮಿ ವಿನಯ್. ಚಳ್ಳಕೆರೆ:-ಸಕಾರಾತ್ಮಕ ಚಿಂತನೆಗಳ ಅನುಷ್ಠಾನದಿಂದ ನಮ್ಮ ನಿತ್ಯ ದಿನಚರಿ ದಿವ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ರಶ್ಮಿ ವಿನಯ್ ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಲು ಪ್ರಾರ್ಥನೆ,ಭಜನೆ, ಧ್ಯಾನ,ಸೇವೆ,ತ್ಯಾಗ, ಪ್ರವಚನಗಳನ್ನು ಆಲಿಸುವುದು ಹಾಗೂ ಶ್ರೀಮದ್ ಭಗವದ್ಗೀತೆ ಸೇರಿದಂತೆ ಸದ್ಗ್ರಂಥಗಳ ಅಧ್ಯಯನ ಮತ್ತು ಪಾರಾಯಣ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಜೀವನವನ್ನು ಒಂದು ಪರೀಕ್ಷೆ ಎಂಬಂತೆ ಪರಿಗಣಿಸಿ ಅದನ್ನು ಧೈರ್ಯವಾಗಿ ಎದುರಿಸಿ ಸಾರ್ಥಕ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸ ಮಾಡಿಸಿದರು. ತರಗತಿಯಲ್ಲಿ ವೆಂಕಟಲಕ್ಷ್ಮೀ, ಸಂತೋಷ ಕುಮಾರ್, ಚೇತನ್,ಚಾರ್ಮಿಶ್ರೀ, ಸೃಷ್ಟಿ ಕುರುಬರ್, ರಶ್ಮಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

