ಚಳ್ಳಕೆರೆ :
ಹಿರಿಯೂರು: ಒಂದು ವಾರದೊಳಗೆ ನೀರು ಕೊಡಿ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ
ಹೋಬಳಿಯ ಆರು ಗ್ರಾಮ ಪಂಚಾಯತಿಗಳ ಸುಮಾರು 100
ಹಳ್ಳಿಗಳಿಗೆ ಒಂದು ವಾರದೊಳಗೆ ಕುಡಿವ ನೀರು ಪೂರೈಸಲು ಜಲ
ಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ ಡಿಸಿಎಂ ಡಿಕೆ ಶಿವಕುಮಾರ್
ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ
ಶಾಸಕರು ಮತ್ತು ಜಲಸಂಪನ್ಮೂಲ ಅಧಿಕಾರಿಗಳೊಂದಿಗೆ ಚರ್ಚಿಸಿ,
ಕೂಡಲೇ ನೀರು ಪೂರೈಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

