ಚಳ್ಳಕೆರೆ : ಚಿತ್ರದುರ್ಗ: ನಾವೇನು ಮೇಲೆ ಬರುತ್ತದೆವೊ ಇಲ್ಲ ಹೀಗೆ
ಕಾಲವಾಗುತ್ತೇವೋ
ಚಿತ್ರದುರ್ಗದಲ್ಲಿ ಗುರುವಾರ ಮಾತನಾಡಿದ ಚಮ್ಮಾರ ಸಮಾಜದ
ಮುಖಂಡ ಕೆಪಿ ಶಿವಣ್ಣ, ಎಲ್ಲಾ ಸಮಾಜಗಳು ಸರ್ಕಾರಿ
ಸೌಲಭ್ಯಗಳನ್ನು ಪಡೆದುಕೊಂಡಿವೆ ಆದರೆ ಕಮ್ಮಾರ ಸಮಾಜ ಮಾತ್ರ
ಎಲ್ಲದರಿಂದ ವಂಚಿತವಾಗಿರುವುದು ದುರಂತ ಎಂದು ಬೇಸರ
ವ್ಯಕ್ತಪಡಿಸಿದರು. ಅತ್ಯಂತ ಸಂಕಷ್ಟದಲ್ಲಿರುವ ಈ ಸಮಾಜವನ್ನು
ಗುರುತಿಸಬೇಕು. ಅನೇಕ ಸಮೀಕ್ಷೆಗಳಾದರೂ ನಮ್ಮನ್ನು
ಗುರುತಿಸಿಲ್ಲ. ನಾವೇನು ಮೇಲೆ ಬರುತ್ತೇವೆಯೊ ಇಲ್ಲ ಹೀಗೆಯೇ
ಮುಕ್ತಾಯವಾಗುತ್ತದೆಯೋ ಎಂದು ಅಸಮಾಧಾನಗೊಂಡರು.

