ಚಳ್ಳಕೆರೆ: ಪ್ರೇಯಸಿಯಿಂದಲೇ ಪ್ರಿಯಕರನ ಕೊಲೆ
ಚಳ್ಳಕೆರೆ ಹಿರೇಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಶವದ ರಹಸ್ಯ
ಇಂದು ಬಯಲಾಗಿದೆ. ಕೊಲೆಯಾದ ಬಾಲರಾಜ್ ನ ಪ್ರೇಯಸಿಯೇ
ಅವನ ಕೊಲೆ ಮಾಡಿದ್ದಾಗಿ ತನಿಖೆಯಲ್ಲಿ ಪೊಲೀಸರ ಮುಂದೆ
ಒಪ್ಪಿಕೊಂಡಿದ್ದಾಳೆ. ಹಿರೇಹಳ್ಳಿಗೆ ಮಾರಮ್ಮನ ಹಬ್ಬಕ್ಕೆ ಬಾಲರಾಜ್
ನನ್ನು ಕರೆಸಿಕೊಂಡಿದ್ದ ಪ್ರೇಯಸಿ ನಾಗಮಣಿ ಮತ್ತು ಬಾಲರಾಜ್
ನಡುವೆ ಅಕ್ರಮ ಸಂಬಂಧ ಬಗ್ಗೆ ಜಗಳ ನಡೆದಿದೆ. ಇದೇ ಕಾರಣಕ್ಕೆ
ನಾಗಮಣಿ ಕೊಲೆ ಮಾಡಿ ತನ್ನ ಜಮೀನಿನ ಕೃಷಿ ಹೊಂಡದಲ್ಲಿ
ಹೂತಿದ್ದಳು. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!