ಚಳ್ಳಕೆರೆ :
ಚಿತ್ರದುರ್ಗ: ಪುತ್ರನ ಹರಸಲು ಬಂದ ಶಕ್ತಿ ದೇವತೆಗಳು
ಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ
ಮಹಾ ಗಣಪತಿ ಮಹೋತ್ಸವದ ಪ್ರಯುಕ್ತ ನಗರದ
ಶಕ್ತಿ ದೇವತೆಗಳು ಚಿತ್ರದುರ್ಗದಲ್ಲಿಂದು ಮಹಾಗಣಪತಿ
ಮಂಟಪದಲ್ಲಿ ಸಮಾಗಮಗೊಂಡವು. ಮೇಲು ದುರ್ಗದ
ಅಧಿದೇವತೆ ಗಣತೆಶ್ವರಿಉಚ್ಚಂಗಿ ಯಲ್ಲಮ್ಮ, ತಿಪ್ಪೇನಘಟ್ಟಮ್ಮ,
ಕಾಳಿಕಾಮಟೇಶ್ವರ ಬನಶಂಕರಿ ದೇವಿ, ಮಲೆನಾಡ ಚೌಡೇಶ್ವರಿ
ದುರ್ಗಾದೇವಿ, ಕನ್ನಿಕಾ ಪರಮೇಶ್ವರಿ, ಕಣಿವೆ ಮಾರಮ್ಮ,
ಸಿಗಂದೂರು ಚೌಡೇಶ್ವರಿ ದೇವತೆಗಳು ಮಂಟಪಕ್ಕೆ ಆಗಮಿಸಿದವು.
ಸಾಲಾಗಿ ಬರುತ್ತಿದ್ದ ದೇವತೆಗಳನ್ನು ಭಕ್ತರು ಕಣ್ಣುಂಬಿಕೊಂಡರು.

