ಚಳ್ಳಕೆರೆ :
ಚಿತ್ರದುರ್ಗ: ಡಿಜೆಗಾಗಿ ರಸ್ತೆಗಿಳಿದ ಹಿಂದೂ
ಸಂಘಟನೆಗಳು
ಚಿತ್ರದುರ್ಗದಲ್ಲಿ ಡಿಜೆ ಮೇಲಿನ ನಿರ್ಬಂಧವನ್ನು ಖಂಡಿಸಿ
ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ವಿಶ್ವ ಹಿಂದೂ
ಪರಿಷತ್ ಮತ್ತು ಬಜರಂಗದಳದ ಹಿಂದೂ ಮಹಾ ಗಣಪತಿ
ವೇದಿಕೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು
ಓಬವ್ವ ವೃತ್ತದ ವರೆಗೆ ತಲುಪಿತು. ಪ್ರತಿಭಟನಾಕಾರರು ಕೇಸರಿ
ಭಾವುಟಗಳನ್ನು ಹಿಡಿದು, ಮದ್ದೂರಿನ ಗಣೇಶ ವಿಸರ್ಜನೆ
ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗಣೇಶ ವಿಸರ್ಜನೆಗೆ
ಸರ್ಕಾರದಿಂದ ತಡೆ ಒಡ್ಡುತ್ತಿರುವುದನ್ನು ಖಂಡಿಸಿದರು.

