ಚಳ್ಳಕೆರೆ :
ಚಳ್ಳಕೆರೆ: ಸಿಂಗಲ್ ಫೇಸ್ ನಿಂತರ ವಿದ್ಯುತ್ ಗಾಗಿ ರೈತರ
ಪ್ರತಿಭಟನೆ
ಚಳ್ಳಕೆರೆ ತಾಲೂಕಿನಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ರೈತರ
ಪಂಪ್ಸೆಟ್ ಲೈನ್ಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ
ಸ್ಥಗಿತಗೊಳಿಸಿರುವುದರಿಂದ ತೋಟದ ಮನೆಗಳಲ್ಲಿ ವಾಸವಿರುವ
ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿಂದೆ ನೀಡುತ್ತಿದ್ದಂತೆ
ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿ, ರಾಜ್ಯ ರೈತ ಸಂಘದ
ಪದಾಧಿಕಾರಿಗಳು ಇಂದು ಚಳ್ಳಕೆರೆ ಬೆಸ್ಕಾಂ ಕಚೇರಿ ಎದುರು ಇಂದು
ಪ್ರತಿಭಟನೆ ನಡೆಸಿದರು.

