ಚಳ್ಳಕೆರೆ :

ಚಿತ್ರದುರ್ಗ: ಜಾತಿ ಗಣತಿಯಲ್ಲಿ ರೆಡ್ಡಿ ಎಂದು ನಮೂದಿಸಿ
ಮೂಲ ರೆಡ್ಡಿ ಸಮಾಜವು ಪಂಗಡಗಳಾಗಿ
ವಿಭಜನೆಯಾಗಿರುವುದರಿಂದ, ರಾಜ್ಯ ಸರ್ಕಾರ ಸೆಪ್ಟೆಂಬರ್
22 ರಿಂದ ನಡೆಸುವ ಜಾತಿಗಣತಿ ಸಮೀಕ್ಷೆಯಲ್ಲಿ ಧರ್ಮದ
ಕಾಲಂನಲ್ಲಿ ‘ಹಿಂದೂ’ ಮತ್ತು ಜಾತಿ ಕಾಲಂನಲ್ಲಿ ‘ರೆಡ್ಡಿ’ ಎಂದು
ನಮೂದಿಸಬೇಕೆಂದು ಎರೆ ಹೊಸಳ್ಳಿ ರೆಡ್ಡಿ ಗುರುಪೀಠದ
ವೇಮನಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ರೆಡ್ಡಿಗಳು ತಮ್ಮ ಒಳಪಂಗಡಗಳನ್ನು ಮರೆತು ಒಗ್ಗಟ್ಟಾಗಬೇಕು.
ಮುಂಬೈ, ಹೈದರಾಬಾದ್, ಕರ್ನಾಟಕ ಮತ್ತು ಹಳೆ ಮೈಸೂರು
ಭಾಗಗಳಲ್ಲಿರುವ ಎಲ್ಲಾ ರೆಡ್ಡಿಗಳು ಒಗ್ಗಟ್ಟಾಗಿರಬೇಕೆಂದು ಕರೆ
ನೀಡಿದರು.

About The Author

Namma Challakere Local News
error: Content is protected !!