ಚಳ್ಳಕೆರೆ :
ಮೊಳಕಾಲ್ಕೂರು: ಮುಸುಕುಧಾರಿ ವ್ಯಕ್ತಿಗಳ ಓಡಾಟ
ಹೆಚ್ಚಿದ ಭೀತಿ
ಮೊಳಕಾಲ್ಕೂರಿನಲ್ಲಿ ಕಳ್ಳರು ಮತ್ತು ಅನಾಮಿಕ ವ್ಯಕ್ತಿಗಳ ಓಡಾಟ
ಹೆಚ್ಚಾಗಿದ್ದು, ನಾಗರಿಕರು ಭಯಭೀತರಾಗಿದ್ದಾರೆ.
ಕೋನಸಾಗರ
ರಸ್ತೆಯ ಎನ್‌ಐ ಬಡಾವಣೆಯಲ್ಲಿ ತಡರಾತ್ರಿ ಮುಸುಕುಧಾರಿಗಳು
ಓಡಾಡುತ್ತಿರುವುದು, ಮನೆಗಳ ಮುಂದೆ ನಿಂತು ವೀಕ್ಷಿಸುತ್ತಿರುವುದು
ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ನಿವಾಸಿಗಳ ಪ್ರಕಾರ,
ಕಳ್ಳತನಗಳು ನಡೆದಿಲ್ಲವಾದರೂ, ಅವರ ಓಡಾಟದ ಕಾರಣ
ತಿಳಿದಿಲ್ಲ.

